ಸಿಎಂ 'ಕೋವಿಡ್ ಸಂಖ್ಯೆ' ಗೊಂದಲಕ್ಕೆ ಆರೋಗ್ಯ ಇಲಾಖೆ ಸ್ಪಷ್ಟಣೆ

Update: 2020-08-07 11:06 GMT

ಬೆಂಗಳೂರು, ಆ. 7: ಕೊರೋನ ಸೋಂಕಿತರಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ಕೋವಿಡ್-19 ಪಾಸಿಟಿವ್ ಸಂಖ್ಯೆಯ ಗೊಂದಲಕ್ಕೆ ಆರೋಗ್ಯ ಇಲಾಖೆ ಸ್ಪಷ್ಟಣೆ ನೀಡಿದೆ.

ಆರೋಗ್ಯ ಇಲಾಖೆ ಆ.4ರಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದೆ ಎಂದು ತಪ್ಪು ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಇಲಾಖೆಯು ಸೋಂಕಿತ ರೋಗಿಗೆ 2 ಗುರುತಿನ ಸಂಖ್ಯೆಯನ್ನು ನೀಡುತ್ತದೆ. ಒಂದು ರಾಜ್ಯದ  ಗುರುತಿನ ಸಂಖ್ಯೆ, ಮತ್ತೊಂದು ಆಯಾ ಜಿಲ್ಲೆಗಳ ಗುರುತಿನ ಸಂಖ್ಯೆ.

ಆದರೆ, ಮಾಧ್ಯಮಗಳಲ್ಲಿ ರೋಗಿಯೊಬ್ಬರ ರಾಜ್ಯ ಗುರುತಿನ ಸಂಖ್ಯೆ 61,718 ಅನ್ನು (52 ವರ್ಷ, ಪುರುಷ, ಬೆಂಗಳೂರು) ಮುಖ್ಯಮಂತ್ರಿಗಳ ಗುರುತಿನ ಸಂಖ್ಯೆಯೊಂದಿಗೆ ತಪ್ಪಾಗಿ ಹೋಲಿಕೆ ಮಾಡಿ, ತಪ್ಪು ಮಾಹಿತಿ ಪ್ರಸಾರ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ಜಿಲ್ಲಾ ಗುರುತಿನ ಸಂಖ್ಯೆ 61,718 ಆಗಿದ್ದು ರಾಜ್ಯ ಗುರುತಿನ ಸಂಖ್ಯೆಯೂ ಬೇರೆಯಾಗಿರುತ್ತದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಣೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News