ಕೊಡಗಿನಲ್ಲಿ ಕೋವಿಡ್: ಸಾವಿನ ಸಂಖ್ಯೆ11ಕ್ಕೆ ಏರಿಕೆ; 29 ಹೊಸ ಪ್ರಕರಣ ಪತ್ತೆ

Update: 2020-08-07 11:52 GMT

ಮಡಿಕೇರಿ,ಆ.7 : ಮಹಾಮಳೆಯ ಆರ್ಭಟದ ನಡುವೆಯೇ ಕೊಡಗು ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಇಂದು 29 ಹೊಸ ಪ್ರಕರಣಗಳು ಪತ್ತೆಯಾಗಿದೆ. ಓರ್ವ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ.

ಸೋಮವಾರಪೇಟೆ ತಾಲೂಕು ಕುಶಾಲನಗರದ ತಾವರೆಕೆರೆಯ 58 ವರ್ಷದ ಮಹಿಳೆಯೊಬ್ಬರು ಶುಕ್ರವಾರ ಸಾವಿಗೀಡಾಗಿದ್ದು, ಇವರ ಗಂಟಲು, ಮೂಗು ದ್ರವ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ಕೊರೋನ ಸೋಂಕು ಬಾಧಿಸಿರುವುದು ದೃಢಪಟ್ಟಿದೆ.

ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಸ್ತಮಾದಿಂದ ಕಾಯಿಲೆಗಳಿದ್ದ ಅವರು ನಾಲ್ಕು ದಿನಗಳಿಂದ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಆ.5ರಂದು ಕುಶಾಲನಗರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. 

ಆಸ್ಪತ್ರೆಯಲ್ಲಿ ಗಂಟಲು/ಮೂಗು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ಶುಕ್ರವಾರ ವರದಿ ಬಂದಿದ್ದು,  ಅದೇ ದಿನ ಅವರು ಸಾವನ್ನಪಿದ್ದಾರೆ.

ಆದ್ದರಿಂದ ಇದನ್ನು ಕೋವಿಡ್ ಸಂಬಂಧದ ಸಾವು ಎಂದು ಪರಿಗಣಿಸಿ, ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ಮೃತ ದೇಹದ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

29 ಮಂದಿಯಲ್ಲಿ ಸೋಂಕು
ಮತ್ತೊಂದೆಡೆ ಶುಕ್ರವಾರ ಹೊಸದಾಗಿ 29 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 639ಕ್ಕೆ ಏರಿಕೆಯಾಗಿದೆ.

ಶುಕ್ರವಾರ ವೀರಾಜಪೇಟೆಯ  ಕೆ.ಬೋಯಿಕೇರಿಯ 28 ವರ್ಷದ ಪುರುಷ, ಸೋಮವಾರಪೇಟೆ ತೊರೆನೂರಿನ 27 ವರ್ಷದ ಮಹಿಳೆ, ಮಡಿಕೇರಿ ಚೈನ್ ಗೇಟ್ ಬಳಿಯ 54 ವರ್ಷದ ಪುರುಷ, ಮಡಿಕೇರಿ ಮುತ್ತಪ್ಪ ದೇವಾಲಯದ 50 ವರ್ಷದ ಪುರುಷ, ವೀರಾಜಪೇಟೆ ಪೊನ್ನಂಪೇಟೆಯ ಕುಂದ ರಸ್ತೆಯ 50 ವರ್ಷದ ಪುರುಷ, ವೀರಾಜಪೇಟೆ ಪೊನ್ನಂಪೇಟೆಯ 53 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.

ಸಂಪಾಜೆ ಕೊಯ್ನಾಡುವಿನ 32 ವರ್ಷದ ಮಹಿಳೆ, ಮಡಿಕೇರಿ ಎಲ್ ಐ ಸಿ ಕಚೇರಿ ಬಳಿಯ 53 ವರ್ಷದ ಮಹಿಳೆ, ಶನಿವಾರಸಂತೆಯ ದುಂಡಳ್ಳಿಯ 47 ವರ್ಷದ ಪುರುಷ, ರ್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಮುಖಾಂತರ ವೀರಾಜಪೇಟೆಯ ವಿಜಯನಗರದ 52 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ 2 ಗಂಟೆ ವೇಳೆಗೆ 19 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ.

ಸೋಮವಾರಪೇಟೆಯ ಗೆಜ್ಜೆಹನಕೋಡುವಿನ 63 ವರ್ಷದ ಮಹಿಳೆ, ಗೌಡಳ್ಳಿಯ ಆರೋಗ್ಯ ವಸತಿ ಗೃಹದ 54 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆ, ಕುಶಾಲನಗರದ ತಾವರೆಕೆರೆಯ 58 ವರ್ಷದ ಮಹಿಳೆ, ಸೋಮವಾರಪೇಟೆಯ ರೇಂಜರ್ ಬ್ಲಾಕ್‍ನ 25 ವರ್ಷದ  ಇಬ್ಬರು ಪುರುಷರು, ಸುಂಟಿಕೊಪ್ಪದ ಕೆಇಬಿ ರಸ್ತೆಯ ಅಪ್ಪಾರಂಡ ಎಕ್ಸ್‍ಟೆನ್ಷನ್‍ನ 9 ವರ್ಷದ ಬಾಲಕಿ, ಸಿದ್ದಾಪುರದ ಎಂ.ಜಿ ರಸ್ತೆಯ ಜಿಎಂಪಿ ಶಾಲೆ ಬಳಿಯ 48 ವರ್ಷದ ಪುರುಷ, ಸಿದ್ದಾಪುರದ ಅಂಬೇಡ್ಕರ್ ನಗರದ 32 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.   

ವೀರಾಜಪೇಟೆಯ ಚಿಕ್ಕಪೇಟೆಯ 9ನೇ ಬ್ಲಾಕ್‍ನ 22 ವರ್ಷದ ಪುರುಷ, ಸೋಮವಾರಪೇಟೆಯ ಮಾದಾಪುರ ಜಂಬೂರು ಬಾಣೆಯ 77 ವರ್ಷದ ಮಹಿಳೆ, ಚೆಟ್ಟಳ್ಳಿಯ ಅಬ್ಯಾಲದ 22 ವರ್ಷದ ಮಹಿಳೆ, ಸೋಮವಾರಪೇಟೆ ಶಾಂತಳ್ಳಿ ಬಸವನಕಟ್ಟೆಯ 45 ವರ್ಷದ ಮಹಿಳೆ, ರ್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಮುಖಾಂತರ ಗೋಣಿಕೊಪ್ಪದ ತಿತಿಮತಿಯ 36 ವರ್ಷದ ಪುರುಷ, ವೀರಾಜಪೇಟೆಯ ಸುಣ್ಣದಬೀದಿಯ 53 ವರ್ಷದ ಪುರುಷ,  ಕುಶಾಲನಗರ ಮುಳ್ಳುಸೋಗೆಯ 61 ವರ್ಷದ ಪುರುಷ, 55 ವರ್ಷದ ಮಹಿಳೆ, 28 ವರ್ಷದ ಮಹಿಳೆ, 21 ವರ್ಷದ ಪುರುಷ, 90 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 639 ಕೋವಿಡ್-19 ಪ್ರಕರಣಗಳು ದೃಢಪಟ್ಟಂತಾಗಿದ್ದಾಗಿದ್ದು, ಈ ಪೈಕಿ 381 ಮಂದಿ ಗುಣಮುಖರಾಗಿದ್ದಾರೆ. 248 ಸಕ್ರಿಯ ಪ್ರಕರಣಗಳಿದ್ದು, 11 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 184 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News