ರಾಜ್ಯದಲ್ಲಿ ಕೊರೋನ ಸೋಂಕಿಗೆ ಮತ್ತೆ 101 ಮಂದಿ ಬಲಿ; ಸಾವಿನ ಸಂಖ್ಯೆ 2,998ಕ್ಕೆ ಏರಿಕೆ

Update: 2020-08-07 15:58 GMT

ಬೆಂಗಳೂರು, ಆ.7: ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಹೊಸದಾಗಿ 101 ಮಂದಿ ಮೃತಪಟ್ಟಿದ್ದಾರೆ. 6,670 ಮಂದಿಗೆ ಕೊರೋನ ಸೋಂಕು ತಗುಲಿದ್ದು, 3,951 ಮಂದಿ ಗುಣಮುಖರಾಗಿದ್ದಾರೆ. 

ಈ ಮೂಲಕ ಕೊರೋನ ಸೋಂಕು ಪ್ರಕರಣಗಳು 1,64,924ಕ್ಕೆ ಏರಿಕೆಯಾಗಿದ್ದು, ಸೋಂಕಿನಿಂದ ಈವರೆಗೆ  2,998 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 84,232 ಮಂದಿ ಗುಣಮುಖರಾಗಿದ್ದಾರೆ. 

ಒಂದು ಜಿಲ್ಲೆ ತ್ರಿಶಕ, ನಾಲ್ಕು ಜಿಲ್ಲೆ ದ್ವಿಶತಕ, 12 ಜಿಲ್ಲೆ ಶತಕ: ಬೆಳಗಾವಿ ಜಿಲ್ಲೆಯಲ್ಲಿ 390ಕ್ಕೂ ಹೆಚ್ಚು ಮಂದಿ ಸೋಂಕು, ಕಲಬುರ್ಗಿ, ಧಾರವಾಡ, ಉಡುಪಿ, ಮೈಸೂರು ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಮಂದಿ ಸೋಂಕು, ಕೊಪ್ಪಳ, ರಾಯಚೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ, ಹಾಸನ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಗದಗ, ಮಂಡ್ಯ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದಾರೆ. ಬೆಂಗಳೂರು ನಗರ 2,147 ಮಂದಿ ಸೋಂಕಿತ ಪ್ರಕರಣಗಳು, ಬಳ್ಳಾರಿ ಜಿಲ್ಲೆಯಲ್ಲಿ 684  ಮಂದಿಗೆ ಸೋಂಕು ತಗುಲಿದೆ. 

ಗುಣಮುಖ: 3,951 ಮಂದಿಯಲ್ಲಿ ಬೆಂಗಳೂರು ನಗರದಲ್ಲಿ 1,131, ಬಳ್ಳಾರಿ 627, ದಾವಣಗೆರೆ 206, ಕಲಬುರ್ಗಿ 203, ದಕ್ಷಿಣ ಕನ್ನಡ 188, ಶಿವಮೊಗ್ಗ 135, ವಿಜಯಪುರ 128 ಮಂದಿ ಗುಣಮುಖರಾಗಿದ್ದಾರೆ.

ಐಸಿಯುನಲ್ಲಿ ಇರುವವರು: ಬೆಂಗಳೂರು ನಗರ 326, ಹಾಸನ 47, ಧಾರವಾಡ 40, ದಾವಣಗೆರೆ 35, ಕಲಬುರ್ಗಿ 31, ಬಳ್ಳಾರಿ 23, ಕೊಪ್ಪಳ 19, ರಾಯಚೂರು 17, ದಕ್ಷಿಣ ಕನ್ನಡ, ಮಂಡ್ಯ ತಲಾ 16, ಗದಗ 15, ಚಿತ್ರದುರ್ಗ 13, ಮೈಸೂರು 12, ಬೀದರ್ 11, ತುಮಕೂರು 10, ಬೆಳಗಾವಿ 9, ಹಾವೇರಿ 7, ಶಿವಮೊಗ್ಗ 6, ಚಾಮರಾಜನಗರ, ಚಿಕ್ಕಬಳ್ಳಾಪುರ, ಉಡುಪಿ ತಲಾ 5, ಬಾಗಲಕೋಟೆ 4, ಚಿಕ್ಕಮಗಳೂರು, ಕೊಡಗು ತಲಾ 2, ಉತ್ತರ ಕನ್ನಡ, ವಿಜಯಪುರ ಜಿಲ್ಲೆಯಲ್ಲಿ ತಲಾ 1 ಪ್ರಕರಣ ವರದಿಯಾಗಿದೆ. 

ಜಿಲ್ಲಾವಾರು ಸೋಂಕಿನ ವಿವರ: ರಾಜ್ಯದಲ್ಲಿ 6,670 ಸೋಂಕಿತರಲ್ಲಿ ಬೆಂಗಳೂರು ನಗರ 2,147, ಬಳ್ಳಾರಿ 684, ಬೆಳಗಾವಿ 390, ಕಲಬುರ್ಗಿ 271, ಧಾರವಾಡ 266, ಉಡುಪಿ 246, ಮೈಸೂರು 242, ಕೊಪ್ಪಳ 173, ರಾಯಚೂರು 171, ದಕ್ಷಿಣ ಕನ್ನಡ 166, ಶಿವಮೊಗ್ಗ 151, ಬಾಗಲಕೋಟೆ 148, ವಿಜಯಪುರ 143, ಹಾಸನ 138, ಉತ್ತರ ಕನ್ನಡ 120, ಬೆಂಗಳೂರು ಗ್ರಾಮಾಂತರ 119, ದಾವಣಗೆರೆ 111, ಗದಗ 105, ಮಂಡ್ಯ 102, ರಾಮನಗರ 93, ಹಾವೇರಿ 90, ಕೋಲಾರ 88, ಬೀದರ್ 84, ತುಮಕೂರು 76, ಯಾದಗಿರಿ 70, ಚಿಕ್ಕಮಗಳೂರು 65, ಚಿಕ್ಕಬಳ್ಳಾಪುರ 64, ಚಾಮರಾಜನಗರ 63, ಚಿತ್ರದುರ್ಗ 57, ಕೊಡಗು ಜಿಲ್ಲೆಯಲ್ಲಿ 27 ಮಂದಿ ಗುಣಮುಖರಾಗಿದ್ದಾರೆ. 

ಮರಣ ಪ್ರಮಾಣ: ಕರ್ನಾಟಕದಲ್ಲಿ ಕೊರೋನ ಸಾವಿನ ಪ್ರಮಾಣ ಪ್ರತಿ 10 ಲಕ್ಷಕ್ಕೆ 42 ಇದೆ. ಹೊಸದಿಲ್ಲಿಯಲ್ಲಿ 204, ಮಹಾರಾಷ್ಟ್ರದಲ್ಲಿ 134, ತಮಿಳುನಾಡಿನಲ್ಲಿ 58, ಪಾಂಡಿಚೆರಿಯಲ್ಲಿ 43 ಮರಣ ಪ್ರಮಾಣ ಇದೆ. ಮುಂಬೈನಲ್ಲಿ ಪ್ರತಿ 10 ಲಕ್ಷಕ್ಕೆ 529, ಚೈನ್ನೈನಲ್ಲಿ 313, ಪುಣೆಯಲ್ಲಿ 258, ಅಹ್ಮದಾಬಾದ್‍ನಲ್ಲಿ 224, ಕೋಲ್ಕತ್ತದಲ್ಲಿ 191 ಮರಣ ಪ್ರಮಾಣ ಇದೆ. ಆದರೆ, ಬೆಂಗಳೂರಿನಲ್ಲಿ 121 ಮರಣ ಪ್ರಮಾಣ ಇದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News