ಆ.9ರಂದು ಎಸ್ಸೆಸ್ಸೆಫ್‍ನಿಂದ ದ್ವಿತೀಯ ಹಂತದ ಡೀನ್ ತರಬೇತಿ ಕಾರ್ಯಾಗಾರ

Update: 2020-08-08 18:46 GMT

ಬೆಂಗಳೂರು, ಆ.8: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಜಿಲ್ಲಾ ಹಾಗೂ ಝೋನ್ ನಾಯಕರಿಗೆ ನಡೆಸುವ ತರಬೇತಿ ಕಾರ್ಯಗಾರದ ದ್ವಿತೀಯ ಹಂತದ ಕಾರ್ಯಾಗಾರವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಉಮ್ಮರ್ ಅಸ್ಸಖಾಫ್ ತಂಙಳ್ ಮದನಿರವರ ಅಧ್ಯಕ್ಷತೆಯಲ್ಲಿ ಆ.9ರಂದು ರಾತ್ರಿ 9 ಗಂಟೆಗೆ Zoom ನಲ್ಲಿ ನಡೆಯಲಿದೆ.

ಎಸ್ಸೆಸ್ಸೆಫ್ ಸುಪ್ರೀಂ ಕೌನ್ಸಿಲ್ ನಾಯಕರು ಹಾಗೂ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪ್ರಖ್ಯಾತ ವಾಗ್ಮಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ತರಬೇತಿಯನ್ನು ನಡೆಸಲಿದ್ದಾರೆ.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಕೆ.ಎಂ ಮುಸ್ತಫಾ ನಈಮಿ ಡೀನ್ ಕುರಿತು ಮಾಹಿತಿ ನೀಡಲಿದ್ದಾರೆ. ರಾಜ್ಯ ಸುಪ್ರಿಂ ಕೌನ್ಸಿಲ್ ನಾಯಕ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ಣ, ಹಫೀಳ್ ಸಅದಿ ಮಡಿಕೇರಿ, ಸುಪ್ರೀಂ ಕೌನ್ಸಿಲ್ ಕನ್ವೀನರ್ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು, ಎಸ್ಸೆಸ್ಸೆಫ್ ರಾಜ್ಯ ನಿಕಟಪೂರ್ವ ಅಧ್ಯಕ್ಷ ಇಸ್ಮಾಯಿಲ್ ಸಖಾಪಿ ಕೊಂಡಂಗೇರಿ, ರಾಜ್ಯ ನಾಯಕರಾದ ಸಯ್ಯಿದ್ ಅಲವೀ ತಂಙಳ್ ಕರ್ಕಿ, ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ,ರಾಜ್ಯ ಉಪಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ, ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ ಹಾಗೂ ರಾಜ್ಯ ನಾಯಕರು ಉಪಸ್ಥಿತಲಿರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News