ನಮ್ಮ ರಾಜ್ಯದಲ್ಲಿ ನಮ್ಮ ಮಾತೃಭಾಷೆಯೆ ಸಾರ್ವಭೌಮ: ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್

Update: 2020-08-10 18:09 GMT

ಬೆಂಗಳೂರು, ಆ.10: ಹಿಂದಿ ಭಾಷೆ ಬರುವುದಿಲ್ಲವೆಂದು ಸಂಸದೆ ಕನಿಮೋಳಿಯವರನ್ನು ನಡೆಸಿಕೊಂಡ ರೀತಿಗೆ ನನ್ನ ಧಿಕ್ಕಾರವಿದೆ. ಇದು ಕೇವಲ ಅವರಿಗೆ ಮಾತ್ರವಲ್ಲ ಇಡೀ ದಕ್ಷಿಣ ಭಾರತೀಯರಿಗೆ ಮಾಡಿದ ಅವಮಾನ. ಹಿಂದಿಯಂತೆ ಇನ್ನು 22 ಅಧಿಕೃತ ಭಾಷೆಗಳು ಇನ್ನು ಸಾವಿರಾರು ಭಾಷೆಗಳಿವೆ ಎಂದು ಮರೆತಂತಿದೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಹಿಂದಿ ಬರುವುದಿಲ್ಲ ಎಂಬ ನೆಪವನ್ನಿಟ್ಟುಕೊಂಡು ಅನೇಕ ಪ್ರತಿಭಾವಂತರಿಗೆ, ಅನೇಕ ವಿಷಯಗಳಲ್ಲಿ ಇದೆ ತಾರತಮ್ಯ ಮುಂದುವರೆದಿದೆ ಇದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News