ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಮರು ಹಂಚಿಕೆ

Update: 2020-08-11 16:24 GMT

ಬೆಂಗಳೂರು, ಆ.11: ಮುಖ್ಯಮಂತ್ರಿಯ ಸಚಿವಾಲಯದ ಅಧಿಕಾರಿಗಳಿಗೆ ಕಳೆದ ಎಪ್ರಿಲ್ 9ರಂದು ಕರ್ತವ್ಯ ಹಂಚಿಕೆ ಮಾಡಲಾಗಿದ್ದ ಆದೇಶವನ್ನು ಪರಿಷ್ಕರಿಸಿ, ಮರು ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್-ಡಿಪಿಎಆರ್, ಆರ್ಥಿಕ, ಇಂಧನ, ನಗರಾಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ, ಕೇಂದ್ರ ಸರಕಾರ ಹಾಗೂ ಇತರ ರಾಜ್ಯಗಳೊಂದಿಗೆ ಸಂಪರ್ಕ.

ಮುಖ್ಯಮಂತ್ರಿಯ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್-ಡಿಪಿಎಆರ್, ಗೃಹ, ಜಲಸಂಪನ್ಮೂಲ, ಸಣ್ಣ ನೀರಾವರಿ, ವಾಣಿಜ್ಯ ಮತ್ತು ಕೈಗಾರಿಕೆ, ಸಣ್ಣ ಕೈಗಾರಿಕೆ, ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ವಾಣಿಜ್ಯ ತೆರಿಗೆ ಇಲಾಖೆ.

ಕನ್ನಡ ಮತ್ತು ಸಂಸ್ಕೃತಿ, ಯೋಜನೆ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಮುಖ್ಯಮಂತ್ರಿ ಸಚಿವಾಲಯದಲ್ಲಿನ ಅನುಷ್ಠಾನ, ಮೇಲ್ಕಂಡ ಎಲ್ಲ ಇಲಾಖೆಗಳ ವರ್ಗಾವಣೆ ವಿಷಯ, ಮೇಲ್ಕಂಡ ಇಲಾಖೆಗಳ ಸಚಿವ ಸಂಪುಟದ ವಿಷಯಗಳು, ಹೊರಗಿನ ಅನುದಾನಿತ ಯೋಜನೆಗಳ ಸಮನ್ವಯತೆ, ನಿರ್ವಹಣೆ, ವಿವಿಐಪಿಗಳೊಂದಿಗೆ ಸಂಪರ್ಕ.

ಮುಖ್ಯಮಂತ್ರಿಯ ಕಾರ್ಯದರ್ಶಿ ಗಿರೀಶ್ ಸಿ.ಹೊಸೂರ್-ಎಲ್ಲ ಇಲಾಖೆಗಳಿಗೆ ಅನುದಾನ ಬಿಡುಗಡೆ ಮಾಡಿಸುವ ಸಂಬಂಧ ಕೇಂದ್ರ ಸರಕಾರದ ಜೊತೆ ಸಮನ್ವಯತೆ, ನಿಗದಿತ ಅಧಿಕಾರಿಗೆ ವಹಿಸಿದ ಜವಾಬ್ದಾರಿ ಹೊರತುಪಡಿಸಿ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರಿಗೆ ಸಂಬಂಧಪಟ್ಟ ವಿಷಯಗಳು.

ಇಂಧನ ಇಲಾಖೆಯ ಸೇವೆಗಳಿಗೆ ಸಂಬಂಧಿಸಿದ ಎಲ್ಲ ವಿಷಯಗಳು(ನಿಗಮಗಳ ನಿರ್ದೇಶಕರ ಜವಾಬ್ದಾರಿ ಹೊರತುಪಡಿಸಿ), ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳು, ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ, ಸಾರಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಎಸ್‍ಎ ಮತ್ತು ಎಡಿ, ಖಜಾನೆ ಮತ್ತು ಅಬಕಾರಿ ಇಲಾಖೆ, ಗೃಹ ಕಚೇರಿ ಕೃಷ್ಣಾಗೆ ನಿಯೋಜಿಸಿದ ಅಧಿಕಾರಿಗಳೊಂದಿಗೆ ಸಮನ್ವಯತೆ.

ಎಂಐಎಸ್ ಮೂಲಕ ಜಾರಿಗೆ ತಂದಿರುವ ಆದ್ಯತೆಯ ಕಾರ್ಯಕ್ರಮಗಳ ನಿರ್ವಹಣೆ, ಸಚಿವರ ಕಚೇರಿಗಳಿಗೆ ಸಿಬ್ಬಂದಿ ನೇಮಕ, ಮೇಲ್ಕಂಡ ಎಲ್ಲ ಇಲಾಖೆಗಳ ವರ್ಗಾವಣೆ ಮತ್ತು ಸೇವಾ ವಿಷಯಗಳು ಹಾಗೂ ಸಚಿವ ಸಂಪುಟದ ವಿಷಯಗಳು.

ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ(1) ರಾಜಪ್ಪ-ಜವಳಿ, ವಾರ್ತಾ, ಯುವ ಸಬಲೀಕರಣ ಮತ್ತು ಕ್ರೀಡೆ, ಕೌಶಲ್ಯ ಅಭಿವೃದ್ಧಿ ಇಲಾಖೆ, ಸಕ್ಕರೆ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆ, ಮೀನುಗಾರಿಕೆ, ಆಹಾರ ಮತ್ತು ನಾಗರಿಕ ಸರಬರಾಜು, ಕಾರ್ಮಿಕ, ಸಹಕಾರ, ಸಾರ್ವಜನಿಕ ಉದ್ದಿಮೆಗಳು, ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಮೇಲ್ಕಂಡ ಎಲ್ಲ ಇಲಾಖೆಗಳ ವರ್ಗಾವಣೆ, ಸೇವೆ ಹಾಗೂ ಸಚಿವ ಸಂಪುಟದ ವಿಷಯಗಳು. ವಿಐಪಿ ಹಾಗೂ ಸಾರ್ವಜನಿಕರೊಂದಿಗೆ ಮುಖ್ಯಮಂತ್ರಿಯ ಸಭೆ, ಗೃಹ ಕಚೇರಿ ಕೃಷ್ಣಾ ಹಾಗೂ ಸರಕಾರಿ ನಿವಾಸದೊಂದಿಗೆ ಸಮನ್ವಯತೆ.

ಮುಖ್ಯಮಂತ್ರಿಯ ಜಂಟಿ ಕಾರ್ಯದರ್ಶಿ ಪಿ.ಎ.ಗೋಪಾಲ್-ಮುಖ್ಯಮಂತ್ರಿಯ ಪರಿಹಾರ ನಿಧಿ, ಉಪ ಕಾರ್ಯದರ್ಶಿ ರವಿ ಎ.ಆರ್.-ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರ ಎಲ್ಲ ಅಭಿವೃದ್ಧಿ ಯೋಜನೆಗಳು, ಎಂಐಎಸ್ ಹಾಗೂ ಮುಖ್ಯಮಂತ್ರಿ ಕಚೇರಿಯ ಗಣಕೀಕರಣ, ಸಿಎಂ ಡ್ಯಾಶ್ ಬೋರ್ಡ್‍ಗೆ ಸಂಬಂಧಿಸಿದ ವಿಷಯಗಳು, ಜನತಾ ದರ್ಶನ, ಶಿವಮೊಗ್ಗ ಜಿಲ್ಲೆಯ ಸಂಸದ, ಶಾಸಕರು, ವಿಧಾನಪರಿಷತ್ ಸದಸ್ಯರ ಕ್ಷೇತ್ರಗಳಿಗೆ ಸಂಬಂಧಿಸಿದ ಅಭಿವೃದ್ಧಿ ವಿಷಯಗಳು, ಶಾಸಕಾಂಗ ವಿಷಯಗಳು(ವಿಧಾನಸಭೆ/ವಿಧಾನಪರಿಷತ್ತು).

ಮುಖ್ಯಮಂತ್ರಿಯ ವಿಶೇಷ ಕರ್ತವ್ಯಾಧಿಕಾರಿ ಕೆ.ಪಿ.ರುದ್ರಪ್ಪಯ್ಯ-ವಸತಿ, ಪ್ರವಾಸೋದ್ಯಮ, ಈ ಇಲಾಖೆಗಳಿಗೆ ಸಂಬಂಧಿಸಿದ ಎಲ್ಲ ವರ್ಗಾವಣೆ, ಸೇವೆ ಮತ್ತು ಸಚಿವ ಸಂಪುಟದ ವಿಷಯಗಳು, ಉಪ ಕಾರ್ಯದರ್ಶಿ(ಆಡಳಿ)-ಮುಖ್ಯಮಂತ್ರಿ ಸಚಿವಾಲಯದ ಆಡಳಿತ ನಿರ್ವಹಣೆ, ಕೇಂದ್ರ ಸರಕಾರದ ಪತ್ರಗಳಿಗೆ ಉತ್ತರ ಕೊಡುವುದು.

ವಿಶೇಷ ಕರ್ತವ್ಯಾಧಿಕಾರಿ ಡಾ.ಎ.ಲೋಕೇಶ್-ಮುಖ್ಯಮಂತ್ರಿ ನಿವಾಸದ ಉಸ್ತುವಾರಿ, ಶ್ರೀಧರ ಮೂರ್ತಿ-ಕೇಂದ್ರ ಸರಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಮನ್ವಯತೆ, ವಿಜಯ್ ಮಹಾಂತೇಶ್ ದಾನಮ್ಮನವರ್-ಅಧಿಕಾರೇತರ ಸದಸ್ಯರ ನಾಮ ನಿರ್ದೇಶನ, ಮುಖ್ಯಮಂತ್ರಿಯ ಶಿಷ್ಠಾಚಾರದ ವಿಷಯಗಳು, ಮುಖ್ಯಮಂತ್ರಿಯ ಸಭೆಗಳ ಆಯೋಜನೆ, ಪ್ರತಿದಿನದ ಕಾರ್ಯಕ್ರಮಗಳ ಸಿದ್ಧತೆ, ಪ್ರವಾಸ ಕಾರ್ಯಕ್ರಮಗಳು, ವಿಶೇಷ ಅಧಿಕಾರಿ ಎಚ್.ಎಸ್.ಸತೀಶ್-ಗೃಹ ಕಚೇರಿ ಕೃಷ್ಣಾದ ಉಸ್ತುವಾರಿಯನ್ನಾಗಿ ಕರ್ತವ್ಯವನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News