ಎಸೆಸೆಲ್ಸಿ ಪರೀಕ್ಷೆ: ಕೂಲಿ ಕಾರ್ಮಿಕನ ಪುತ್ರಿ ರಮ್ಯಾ ಸಾಧನೆ

Update: 2020-08-11 16:26 GMT

ಬೆಂಗಳೂರು, ಆ. 11: ಚಿತ್ರದುರ್ಗ ಜಿಲ್ಲೆ ಚಳ್ಳಕರೆ ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆರ್.ಎಸ್.ರಮ್ಯಾ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 585(ಶೇ.93.6) ಅಂಕಗಳನ್ನು ಗಳಿಸುವ ಮೂಲಕ ಎ+ ಗ್ರೇಡ್‍ನಲ್ಲಿ ಉತ್ತೀರ್ಣರಾಗಿದ್ದಾರೆ.

ಗಾರೆ ಕೆಲಸದ ಕಾರ್ಮಿಕ ಸೋಮಶೇಖರ್ ಮತ್ತು ಟೈಲರ್ ವೃತ್ತಿ ಮಾಡುವ ಗಿರಿಜಮ್ಮ ದಂಪತಿಯ ಪುತ್ರಿಯಾದ ರಮ್ಯಾ ಬಡತನದ ನಡುವೆ ವಿಶಿಷ್ಟ ಸಾಧನೆ ಮಾಡಿದ್ದಾರೆ. ಕನ್ನಡ-122, ಇಂಗ್ಲಿಷ್-99, ಹಿಂದಿ-97, ಗಣಿತ-93, ವಿಜ್ಞಾನ-80 ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ 94 ಅಂಕಗಳನ್ನು ಗಳಿಸಿದ್ದು, ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News