ಬೇರೆ ರಾಜ್ಯಗಳಿಗೆ ರೈಲು ಸಂಚಾರ ಆರಂಭಿಸಲು ನೈರುತ್ಯ ರೈಲ್ವೆ ಪ್ರಸ್ತಾವ

Update: 2020-08-11 17:27 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.11: ನೈಋತ್ಯ ರೈಲ್ವೆ ಇಲಾಖೆಯು ದೂರದ ನಗರ ಮತ್ತು ರಾಜ್ಯಗಳಿಗೆ ಹೊಸ ರೈಲು ಓಡಿಸಲು ಪ್ರಸ್ತಾವನೆ ಸಿದ್ಧಗೊಳಿಸಿದ್ದು, ರೈಲ್ವೆ ಇಲಾಖೆಯಿಂದ ಒಪ್ಪಿಗೆ ಸಿಕ್ಕಿದ ಬಳಿಕ ರೈಲುಗಳ ಸಂಚಾರ ಆರಂಭವಾಗಲಿದೆ.

ಕರ್ನಾಟಕದ ವಿವಿಧ ಪ್ರದೇಶದಿಂದ ಹೊರಡುವ ರೈಲುಗಳು ಪುನಃ ಇಲ್ಲಿಗೆ ಬಂದು ತಲುಪಲಿವೆ. ಬೆಂಗಳೂರು ವಿಭಾಗದಿಂದಲೂ ಅನೇಕ ಹೊಸ ರೈಲುಗಳು ಸಂಚಾರ ನಡೆಸಲಿವೆ.

ಬೆಂಗಳೂರು ಕಂಟೋನ್ಮೆಂಟ್-ಗೌಹಾತಿ, ಯಶವಂತಪುರ-ಹೌರಾ, ಕೆಎಸ್‍ಆರ್ ಬೆಂಗಳೂರು- ಸೊಲ್ಲಾಪುರ, ಕೆಎಸ್‍ಆರ್-ಮಂಗಳೂರು, ಯಶವಂತಪುರ-ಕಾರವಾರ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಅಲ್ಲದೇ ಹುಬ್ಬಳ್ಳಿ-ಸಿಕಂದರಾಬಾದ್, ಹುಬ್ಬಳ್ಳಿ-ಮೈಸೂರು, ಹುಬ್ಬಳ್ಳಿ-ವಾರಣಾಸಿ, ಹುಬ್ಬಳ್ಳಿ- ಮುಂಬೈ, ವಾಸ್ಕೋಡಾಗಾಮ-ಹೌರಾ ಮಾರ್ಗದಲ್ಲಿಯೂ ರೈಲು ಓಡಿಸುವುದಾಗಿ ನೈಋತ್ಯ ರೈಲ್ವೆ ಹೇಳಿದೆ.

ಈ ಮಾರ್ಗಗಳ ಪೈಕಿ ಕೆಲವು ಮಾರ್ಗದಲ್ಲಿ ವಾರಕ್ಕೆ 2 ಅಥವ 3 ಬಾರಿ ರೈಲು ಸಂಚಾರ ನಡೆಸುತ್ತಿದೆ. ಅದನ್ನು ಪ್ರತಿ ದಿನಕ್ಕೆ ಪರಿವರ್ತನೆ ಮಾಡುವಂತೆ ಮನವಿ ಮಾಡಲಾಗುತ್ತದೆ.

ರೈಲ್ವೆ ಇಲಾಖೆ ಒಪ್ಪಿಗೆ ನೀಡಿದ ಬಳಿಕ ಈ ಮಾರ್ಗಗಳಲ್ಲಿ ರೈಲುಗಳ ಸಂಚಾರ ಆರಂಭವಾಗಲಿದೆ. ಈ ಮಾರ್ಗದಲ್ಲಿ ಈಗ ರೈಲುಗಳು ಸಂಚಾರ ನಡೆಸುತ್ತಿದ್ದರೂ ಬೇರೆ ಸಮಯದಲ್ಲಿ ರೈಲುಗಳನ್ನು ಓಡಿಸಲಾಗುತ್ತದೆ ರಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News