ನಿಂದನೆಯ ಫೇಸ್‍ಬುಕ್ ಪೋಸ್ಟ್, ಹಿಂಸಾಚಾರಗಳೆರಡೂ ಖಂಡನಾರ್ಹ: ಎಸ್ಸೆಸ್ಸೆಫ್

Update: 2020-08-12 15:04 GMT

ಬೆಂಗಳೂರು, ಆ.12: ಪ್ರವಾದಿ ನಿಂದನೆಯ ಫೇಸ್‍ಬುಕ್ ಪೋಸ್ಟ್ ಹಾಗೂ ಹಿಂಸಾಚಾರಗಳೆರಡೂ ಖಂಡನಾರ್ಹ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಅಭಿಪ್ರಾಯಪಟ್ಟಿದೆ.

ಸೋಷಿಯಲ್ ಮೀಡಿಯಾಗಳಲ್ಲಿ ಕೋಮುಪ್ರಚೋದಕ ಪೋಸ್ಟ್ ಹಂಚುವ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಯಾರೇ ಆದರೂ ಶಿಕ್ಷಾರ್ಹರು. ಅದೇ ರೀತಿ ಕಾನೂನು ಕೈಗೆತ್ತಿಕೊಂಡು ಹಿಂಸಾಚಾರಕ್ಕಿಳಿಯುವುದು ಕೂಡ ವಿಶ್ವ ಪ್ರವಾದಿಯವರ ಬೋಧನೆಗೆ ಮಸಿ ಬಳಿಯುವ ಪ್ರಯತ್ನವಾಗಿದೆ. ಯಾರದೇ ಪ್ರಚೋದನಾತ್ಮಕ ಹೇಳಿಕೆಗಳಿಗೆ ವಿವೇಕಯುತವಾಗಿ ಪ್ರತಿಕ್ರಿಯಿಸಬೇಕು. ಹಿಂಸಾತ್ಮಕವಾಗಿ ವರ್ತಿಸಿದರೆ ಪ್ರಚೋದಿಸಿದವರ ದುರುದ್ದೇಶ ಈಡೇರುತ್ತದೆ. ಇದಕ್ಕೆ ಯಾರೂ ಅವಕಾಶ ಕೊಡಬಾರದು ಎಂದು ಎಸ್ಸೆಸ್ಸೆಫ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಈ ಹಿಂದೆಯೂ ಕೆಲವು ದುಷ್ಕರ್ಮಿಗಳು ಅನಗತ್ಯವಾಗಿ ಪ್ರವಾದಿಯವರನ್ನು ಅವಮಾನಕರವಾಗಿ ಚರ್ಚೆಗೆ ಎಳೆದು ತರುವ ಪ್ರಯತ್ನವನ್ನು ಮಾಡಿದ್ದರು. ಅಂತಹ ದುಷ್ಕರ್ಮಿಗಳ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದಿರುವುದು ಖೇದಕರ. ಇನ್ನು ಇಂತಹ ದುಷ್ಕೃತ್ಯಗಳು ಪುನರಾವರ್ತನೆಯಾಗದಂತೆ ರಾಜ್ಯ ಗೃಹ ಇಲಾಖೆಯು ಎಚ್ಚರ ವಹಿಸಬೇಕು ಎಂದು ಎಸ್ಸೆಸ್ಸೆಫ್ ಪ್ರಕಟನೆಯಲ್ಲಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News