ಸ್ವಾತಂತ್ರ್ಯ ದಿನದಂದು ಸಿ.ಟಿ.ರವಿಯ ಸುಳ್ಳಿನ ಭಾಷಣ ಕೇಳುವುದಿಲ್ಲ: ವಿಧಾನ ಪರಿಷತ್ ಸದಸ್ಯ ಭೋಜೆಗೌಡ

Update: 2020-08-13 18:23 GMT

ಚಿಕ್ಕಮಗಳೂರು, ಆ.13: ಕೋವಿಡ್-19, ಅತಿವೃಷ್ಟಿ ಪರಿಹಾರಧನ, ಲಾಕ್‌ಡೌನ್ ಪ್ಯಾಕೇಜ್ ವಿತರಣೆಯಲ್ಲಿ ಬಿಜೆಪಿ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ. ಆ.15ರಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತೆ ಸುಳ್ಳುಗಳ ಪಟ್ಟಿಯನ್ನೇ ಓದುತ್ತಾರೆ. ಅಂದು ಅವರ ಸುಳ್ಳಿನ ಭಾಷಣ ಕೇಳಲು ನಮಗೆ ಇಷ್ಟವಿಲ್ಲ. ಅಂದು ನಗರದ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ ತಿಳಿಸಿದ್ದಾರೆ.

ಗುರುವಾರ ನರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಹೊರತು ಪಡಿಸಿ ಸಿಪಿಐ, ಬಿಎಸ್ಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ದಲಿತ, ರೈತ, ಕನ್ನಡಪರ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಈ ಸಂಬಂಧ ನೆಸಿದ ಸಭೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಾರ ಅಸ್ತಿತ್ವಕ್ಕೆ ಬಂದ ಆರಂಭದಿಂದಲೂ ಜನರಿಗೆ ಕೇವಲ ಸುಳ್ಳು ಭರವಸೆಗಳನ್ನಷ್ಟೇ ನೀಡಿದ್ದಾರೆ. ಬಿಎಸ್‌ವೈ ಅಧಿಕಾರಕ್ಕೆ ಬಂದ ಆರಂಭದಲ್ಲಿ ರೆಸಾರ್ಟ್ ರಾಜಾರಣ ಮಾಡಿದರು.

ಮತ್ತೆ ಕೆಲ ತಿಂಗಳುಗಳ ಕಾಲ ಸಂಪುಟ ರಚನೆಯಲ್ಲಿ ಕಾಲ ಕಳೆದಿದ್ದಾರೆಯೇ ಹೊರತು ಜನಪರ ಯೋಜನೆಳನ್ನು ಜಾರಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು. ರಾಜ್ಯ ಸರಾರ ಜನರಿಗೆ ನೀಡಿದ ಭರವಸೆಳ ಪೈಕಿ ಒಂದನ್ನೂ ಈಡೇರಿಸಿಲ್ಲ. ಕೋವಿಡ್-19 ಸೋಂಕು ರಾಜ್ಯದಲ್ಲೂ ಹರಡುವ ಮುನ್ಸೂಚನೆ ಆರಂಭದಲ್ಲೇ ಸಿಕ್ಕಿದ್ದರೂ ಯಾವುದೇ ಮಂಜಾಗ್ರತಾ ಕ್ರಮವಹಿಸಿಲ್ಲ ಎಂದು ದೂರಿದರು. ಈ ವೇಳೆ ವಿವಿಧ ಪಕ್ಷ, ಸಂಘಟನೆಗಳ ಮುಖಂಡರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ಇದನ್ನು ಖಂಡಿಸಿ ಸ್ವಾತಂತ್ರ್ಯ ದಿನಾಚಣೆಯ ದಿನದಂದು ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ಹಮ್ಮಿಕೊಳ್ಳಲು ಎಲ್ಲ ಪಕ್ಷ, ಸಂಘಟನೆಗಳು ಒಮ್ಮತದಿಂದ ತೀರ್ಮಾನಿಸಿದ್ದೇವೆ. ಸ್ವಾತಂತ್ರ್ಯ ದಿನಾಚರಣೆ ನಮ್ಮ ನಾಡ ಹಬ್ಬವಾಗಿದೆ. ಅದನ್ನು ಬಹಿಷ್ಕರಿಸುವ ಪ್ರಶ್ನೆಯೇ ಇಲ್ಲ. ಜಿಲ್ಲಾಡಳಿತದ ಕಾರ್ಯಕ್ರಮದಲ್ಲಿ ಭಾಗವಹಿಸದೇ ಗಾಂಧಿ ಪ್ರತಿಮೆ ಎದುರು ಪ್ರತ್ಯೇಕವಾಗಿ ಸ್ವಾತಂತ್ರ್ಯ ದಿನಾಚಣೆಯನ್ನು ಆಚರಿಸುತ್ತೇವೆ. ಇದೇ ವೇಳೆ ಬೆಳಗ್ಗೆ 8:30ರಿಂದ 9:30ರವರೆಗೆ ಮೌನ ಪ್ರತಿಭಟನೆಯನ್ನೂ ಹಮ್ಮಿಕೊಳ್ಳುತ್ತೇವೆ. ಇದಕ್ಕೆ ಬಿಜೆಪಿ ಹೊರತು ಪಡಿಸಿ ಎಲ್ಲ ಪಕ್ಷಗಳು, ಪ್ರಗತಿಪರ ಸಂಘಟನೆಗಳ ಸಹಮತವಿದೆ.
- ಎಚ್.ಎಚ್.ದೇವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News