ಹಾಸನ ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಮತ್ತೆ ನಾಲ್ವರು ಬಲಿ; ಮೃತರ ಸಂಖ್ಯೆ 124ಕ್ಕೆ ಏರಿಕೆ

Update: 2020-08-15 12:28 GMT

ಹಾಸನ,ಆ.15: ಜಿಲ್ಲೆಯಲ್ಲಿ ಇಂದು 4 ಮಂದಿ ಕೊರೋನ ಸೋಂಕಿನಿಂದ ಮೃತರಾಗಿದ್ದು, ಮೃತರ ಒಟ್ಟು ಸಂಖ್ಯೆ 124ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ 154 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 4426ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ತಿಳಿಸಿದ್ದಾರೆ.

ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಇಂದು ಮೃತಪಟ್ಟ 4 ಜನರಲ್ಲಿ ಮೂವರು ಅರಸೀಕೆರೆ ತಾಲೂಕಿನವರಾಗಿದ್ದು, ಅವರಲ್ಲಿ 48 ವರ್ಷ ಮತ್ತು 86 ವರ್ಷದ ಪುರುಷರು ಹಾಗೂ 70 ವರ್ಷದ ಮಹಿಳೆಯಾಗಿದ್ದಾರೆ. ಹೊಳೆನರಸೀಪುರ ತಾಲೂಕಿನ 40 ವರ್ಷದ ಪುರುಷ ಕೂಡ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಸಕ್ರಿಯವಾಗಿ 1,849 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 2453 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 54 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಪತ್ತೆಯಾದ 154 ಕೊರೋನ ಸೋಂಕು ಪ್ರಕರಣಗಳಲ್ಲಿ 50 ಜನ ಅರಸೀಕೆರೆ ತಾಲೂಕಿನವರು, 9 ಜನ ಚನ್ನರಾಯಪಟ್ಟಣ ತಾಲೂಕಿನವರು, ಆಲೂರು ತಾಲೂಕಿನಲ್ಲಿ ಒಬ್ಬರು, 30 ಜನ ಹಾಸನ ತಾಲೂಕು, 22 ಜನ ಹೊಳೆನರಸೀಪುರ ತಾಲೂಕು, 28 ಜನ ಅರಕಲಗೂಡು ತಾಲೂಕು, ಬೇಲೂರು ತಾಲೂಕಿನ 5 ಜನ, ಸಕಲೇಶಪುರ ತಾಲೂಕಿನ 7 ಜನರಿಗೆ ಹಾಗೂ ಹೊರ ಜಿಲ್ಲೆಯ ಇಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News