ರಾಜ್ಯದಲ್ಲಿ 8819 ಹೊಸ ಕೊರೋನ ಪ್ರಕರಣಗಳು ದೃಢ; 114 ಮಂದಿ ಸಾವು

Update: 2020-08-15 16:36 GMT

ಬೆಂಗಳೂರು, ಆ.15: ರಾಜ್ಯದಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆಯ ತನಕ 8,819 ಹೊಸ ಕೊರೋನ ಪ್ರಕರಣಗಳು ವರದಿಯಾಗಿದ್ದು, 114 ಜನರು ಮೃತಪಟ್ಟಿದ್ದಾರೆ.

ಇದೀಗ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,19,926 ಕ್ಕೆ ಏರಿಕೆಯಾಗಿದ್ದು, 1,34,811 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನೂ, 81276 ಸಕ್ರಿಯ ಪ್ರಕರಣಗಳಿವೆ. ಐಸಿಯುನಲ್ಲಿ 716 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 3831 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸೋಂಕಿತರ ವಿವರ: ಬೆಂಗಳೂರು ನಗರ 3495, ಬಳ್ಳಾರಿ 759, ಮೈಸೂರು 635, ಬೆಳಗಾವಿ 358, ದಾವಣಗೆರೆ 327, ದಕ್ಷಿಣ ಕನ್ನಡ 271, ಉಡುಪಿ 241, ಧಾರವಾಡ 239, ವಿಜಪುರ 232, ಕಲಬುರಗಿ 189, ಕೊಪ್ಪಳ 178, ಬಾಗಲಕೋಟೆ 168, ತುಮಕೂರು 161, ರಾಯಚೂರು 155, ಹಾಸನ 154, ಬೆಂಗಳೂರು ಗ್ರಾಮಾಂತರ 152, ಗದಗ 142, ಶಿವಮೊಗ್ಗ 133, ಹಾವೇರಿ 116, ಬೀದರ್ 113, ಮಂಡ್ಯ 84, ಚಿಕ್ಕಮಗಳೂರು 79, ಉತ್ತರ ಕನ್ನಡ 75, ಯಾದಗಿರಿ 64, ಚಾಮರಾಜನಗರ 64, ಕೋಲಾರ 55, ರಾಮನಗರ 53, ಕೊಡಗು 48, ಚಿಕ್ಕಬಳ್ಳಾಪುರ 44, ಚಿತ್ರದುರ್ಗ 34 ಹೊಸ ಕೊರೋನ ಪ್ರಕರಣಗಳು ವರದಿಯಾಗಿವೆ.

ಮೃತಪಟ್ಟವರ ವಿವರ: ಬೆಂಗಳೂರು ನಗರ 35, ಬಳ್ಳಾರಿ 6, ಮೈಸೂರು 10, ಬೆಳಗಾವಿ 5, ದಾವಣಗೆರೆ 5, ದಕ್ಷಿಣ ಕನ್ನಡ 6, ಉಡುಪಿ 2, ಧಾರವಾಡ 7, ವಿಜಯಪುರ 2, ಕಲಬುರಗಿ 2, ಕೊಪ್ಪಳ 2, ತುಮಕೂರು 2, ರಾಯಚೂರು 3, ಹಾಸನ 4, ಬೆಂಗಳೂರು ಗ್ರಾಮಾಂತರ 2, ಗದಗ 2, ಶಿವಮೊಗ್ಗ 5, ಹಾವೇರಿ 2, ಬೀದರ್ 3, ಮಂಡ್ಯ 1, ಚಿಕ್ಕಮಗಳೂರು 4, ಉತ್ತರ ಕನ್ನಡ 1, ಯಾದಗಿರಿ 1, ಚಾಮರಾಜನಗರ 1, ಚಿಕ್ಕಬಳ್ಳಾಪುರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News