ತನ್ನ ಮದುವೆ ಕಾರ್ಯಕ್ರಮದಲ್ಲಿ ಸಂವಿಧಾನ ಓದು ಪುಸ್ತಕ, ಕುರ್ಆನ್ ವಿತರಿಸಿದ ಮಂಡ್ಯದ ಯುವಕ

Update: 2020-08-15 17:02 GMT

ಮಂಡ್ಯ, ಆ.15: ಯುವಕರೊಬ್ಬರು ತನ್ನ ಮದುವೆ ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನದ ಪ್ರತಿ ಮತ್ತು ಕುರ್ಆನ್ ಗ್ರಂಥವನ್ನು ವಿತರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ನಗರದ ಹೊರವಲಯದ ಗ್ರೀನ್ ಪ್ಯಾಲೇಸ್‍ನಲ್ಲಿ ನಡೆದ ಮದುವೆಯಲ್ಲಿ ಪತ್ರಕರ್ತ ಸಮೀರ್ ಮಂಡ್ಯ ಅವರು ಸಂವಿಧಾನ ಮತ್ತು ಕುರ್ಆನ್ ಪ್ರತಿ ವಿತರಿಸಿ ಮದುವೆಯನ್ನು ಅರ್ಥಪೂರ್ಣಗೊಳಿಸಿದರು.

ಸಂವಿಧಾನ ಓದು, ಕುರ್ಆನ್ ಹಾಗೂ ತಪ್ಪು ಕಲ್ಪನೆಗಳು ಎಂಬ ಕೃತಿಗಳನ್ನು ಅತಿಥಿಗಳಿಗೆ ವಿತರಿಸುವ ಮೂಲಕ ಸಮೀರ್ ಮತ್ತು ಯಾಸ್ಮಿನ್
ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಧಾರ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್.ಬಿ.ಅಬೂಬಕರ್, ಸ್ಮಾರ್ಟ್ ಇಂಗ್ಲೀಷ್ ಅಕಾಡೆಮಿಯ ಸಲೀಂ ಅಹಮದ್, ಸೋನಿಯಾಗಾಂಧಿ ಬ್ರಿಗೇಡ್ ರಾಜ್ಯಾಧ್ಯಕ್ಷೆ ಸೀಮಾ ಕೌಸರ್, ಇತರ ಗಣ್ಯರು ಅಪರೂಪದ ಮದುವೆಗೆ ಸಾಕ್ಷಿಯಾದರು

ಮೂರು ಅಮೂಲ್ಯ ಕೃತಿಗಳ ವಿತರಣೆಯಿಂದ ಈ ಮದುವೆ ಅತ್ಯಂತ ಮೌಲ್ಯಯುತ, ವಿಶಿಷ್ಟ, ಅರ್ಥಪೂರ್ಣವಾಗಿದೆ. ಸಮೀರ್ ಸಮಾಜದ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ. ಕುರ್ಆನ್ ಬೃಹತ್ ಕೃತಿ, ಇಸ್ಲಾಂ ಧರ್ಮದ ಸಾರವನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಕೊಡುವ ಶ್ರೇಷ್ಠ ಕೃತಿಯಾಗಿದೆ. 'ತಪ್ಪು ಕಲ್ಪನೆಗಳು' ಕೃತಿಯು ಮುಸ್ಲಿಮರ ಮದುವೆ, ಬಹು ಪತ್ನಿತ್ವ, ಧಾರ್ಮಿಕ ವಿಚಾರಗಳಲ್ಲಿ ಇತರ ಜನರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಹೇಳುವ ಕೃತಿಯಾಗಿದೆ. ನ್ಯಾ.ನಾಗಮೋಹನದಾಸ್ ಅವರು ಬರೆದಿರುವ ಸಂವಿಧಾನದ ಓದು ಕೃತಿ, ಭಾರತ ಸಂವಿಧಾನಿಕ ವ್ಯವಸ್ಥೆಯನ್ನು ಅತ್ಯಂತ ಸರಳವಾಗಿ ಸಾಮಾನ್ಯ ಜನರಿಗೆ ಪರಿಚಯ ಮಾಡುವ ಕೃತಿಯಾಗಿದೆ.
-ಕೆ.ಟಿ.ಶ್ರೀಕಂಠೇಗೌಡ, ವಿಧಾನಪರಿಷತ್ ಸದಸ್ಯರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News