×
Ad

ಧೋನಿ ಕ್ರಿಕೆಟ್ ಜಗತ್ತಿಗೆ ಕೊಟ್ಟಿರುವ ಕೊಡುಗೆ ಅನನ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

Update: 2020-08-16 19:04 IST

ಬೆಂಗಳೂರು, ಆ.16: ಅಂತರ್‍ರಾಷ್ಟ್ರೀಯ ಕ್ರಿಕೆಟ್‍ಗೆ ವಿಧಾಯ ಹೇಳಿರುವ ಎಂ.ಎಸ್.ಧೋನಿ ಕ್ರಿಕೆಟ್ ಜಗತ್ತಿಗೆ ಕೊಟ್ಟಿರುವ ಕೊಡುಗೆ ಅನನ್ಯ ಮತ್ತು ಅಪಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನುಡಿದಿದ್ದಾರೆ.

ಅಂತರ್‍ರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಣೆ ಮಾಡಿರುವ ಎಂ.ಎಸ್ ಧೋನಿ ಸಾಧನೆ ಕೊಂಡಾಡಿರುವ ಕಾಂಗ್ರೆಸ್ ಮುಖಂಡ ಈಶ್ವರ್ ಖಂಡ್ರೆ, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅವರೇ ಕ್ರಿಕೆಟ್ ಅಂಗಳದಿಂದ ನಿಮ್ಮ ನಿವೃತ್ತಿ ಘೋಷಣೆ ನಮ್ಮೆಲ್ಲರ ಮನದ ಅಂಗಳವನ್ನೂ ಖಾಲಿಯಾಗಿಸಿದೆ. ನೀವು ಕ್ರಿಕೆಟ್ ಜಗತ್ತಿಗೆ ಕೊಟ್ಟಿರುವ ಕೊಡುಗೆ ಅನನ್ಯ ಮತ್ತು ಅಪಾರ ಎಂದಿದ್ದಾರೆ.

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಖಂಡಿತವಾಗಿಯೂ ನಿಮ್ಮನ್ನ ಮಿಸ್ ಮಾಡಿಕೊಳ್ಳಲಿದ್ದಾರೆ. ಸಾಕಷ್ಟು ಯೋಚಿಸಿಯೇ ನೀವು ಈ ನಿವೃತ್ತಿ ಪ್ರಕಟಿಸಿದ್ದರೂ ಅಭಿಮಾನಿಗಳಿಗಾಗಿ ಇನ್ನೊಮ್ಮೆ ಯೋಚಿಸಿ. ಶುಭವಾಗಲಿ ಎಂದು ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News