ಪಿಯುಸಿ: ಮರುಮೌಲ್ಯಮಾಪನ- ಮರು ಎಣಿಕೆಗೆ ಸಾವಿರಾರು ಅರ್ಜಿ ಸಲ್ಲಿಕೆ

Update: 2020-08-16 17:06 GMT

ಬೆಂಗಳೂರು, ಆ.16: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶದ ಬಳಿಕ ಸಾವಿರಾರು ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಮತ್ತು ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಿದ್ದಾರೆ.

ಮರು ಮೌಲ್ಯಮಾಪನಕ್ಕೆ 11,213 ಹಾಗೂ ಅಂಕಗಳ ಮರು ಎಣಿಕೆಗೆ 1,213 ಅರ್ಜಿಗಳು ಸಲ್ಲಿಕೆಯಾಗಿವೆ. ಕಳೆದ ವರ್ಷ ಎರಡರಿಂದ 13,600 ಅರ್ಜಿಗಳು ಸಲ್ಲಿಕೆಯಾಗಿದ್ದವು, ಈ ವರ್ಷ 12,426 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಪಿಯು ಇಲಾಖೆಯ ಮೂಲಗಳು ತಿಳಿಸಿವೆ.

ಕೆಲವು ಸಂದರ್ಭಗಳಲ್ಲಿ ಮರು ಮೌಲ್ಯಮಾಪನಕ್ಕಿಂತ ಮರು ಎಣಿಕೆಯಲ್ಲಿ ಹೆಚ್ಚಿನ ಫಲಿತಾಂಶ ವ್ಯತ್ಯಾಸ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಅಂಕ ಒಗ್ಗೂಡಿಸುವಾಗ ಮೌಲ್ಯಮಾಪಕರು ಅಥವಾ ಡೇಟಾ ಆಪರೇಟರ್ ಗಳ ಬೇಜವಾಬ್ದಾರಿತನದಿಂದ ವಿದ್ಯಾರ್ಥಿಗಳ ಅಂಕ ಕಡಿತವಾಗಿರುತ್ತದೆ. ಹೀಗಾಗಿ, ಅನೇಕ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಹಾಗೂ ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಆ.10 ಕೊನೆಯ ದಿನಾಂಕವಾಗಿತ್ತು. ಆ ನಂತರ ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಅರ್ಜಿ ಸಲ್ಲಿಸಲು ಆ.14 ರವರೆಗೂ ವಿಸ್ತರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News