ದ್ವಿತೀಯ ಪಿಯು ಪೂರಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

Update: 2020-08-19 14:41 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.19: ದ್ವಿತೀಯ ಪಿಯು ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಸೆ.7ರಿಂದ 19ರವರೆಗೂ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಎಂ.ಕನಗವಲ್ಲಿ ತಿಳಿಸಿದ್ದಾರೆ. 

ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, ದ್ವಿತೀಯ ಪಿಯು ಮುಖ್ಯವಿಷಯಗಳ ಪರೀಕ್ಷೆಯು ಬೆಳಗ್ಗೆ 10.15ರಿಂದ 1.30ರವರೆಗೆ ನಡೆಯಲಿದೆ. ಸಹ ವಿಷಯಗಳ ಪರೀಕ್ಷೆಗಳು ಮಧ್ಯಾಹ್ನ 2.15ರಿಂದ 5.30ರವರೆಗೆ ನಡೆಯಲಿದೆ. ವೇಳಾಪಟ್ಟಿಯನ್ನು ಕಾಲೇಜಿನ ಸೂಚನಾ ಫಲಕದಲ್ಲಿ ಹಾಗೂ ವಿದ್ಯಾರ್ಥಿಗಳ ಗಮನಕ್ಕೆ ತರಬೇಕೆಂದು ರಾಜ್ಯ ಎಲ್ಲ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ.

ವೇಳಾಪಟ್ಟಿ ವಿವರ:
ಸೆ.7ರಂದು ಬೆಳಗ್ಗೆ: ಉರ್ದು, ಸಂಸ್ಕೃತ
ಮಧ್ಯಾಹ್ನ: ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಬೊಬೈಲ್, ಹೆಲ್ತ್‍ಕೇರ್, ಬ್ಯೂಟಿ ಮತ್ತು ವೆಲ್‍ನೆಸ್, ಗೃಹ ವಿಜ್ಞಾನ
-ಸೆ.8ರಂದು ಬೆಳಗ್ಗೆ: ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ
-ಸೆ.9: ಹಿಂದಿ 
ಮಧ್ಯಾಹ್ನ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
-ಸೆ.10ರಂದು ಬೆಳಗ್ಗೆ: ಇಂಗ್ಲಿಷ್ 
-ಸೆ.11ರಂದು ಬೆಳಗ್ಗೆ: ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ 
ಮಧ್ಯಾಹ್ನ: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಭೂಗರ್ಭಶಾಸ್ತ್ರ
-ಸೆ.12ರಂದು ಬೆಳಗ್ಗೆ: ಅರ್ಥಶಾಸ್ತ್ರ, ಭೌತಶಾಸ್ತ್ರ
-ಸೆ.14ರಂದು ಬೆಳಗ್ಗೆ: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ರಾಸಾಯನಶಾಸ್ತ್ರ, ಶಿಕ್ಷಣ
-ಸೆ.15ರಂದು ಬೆಳಗ್ಗೆ: ಕನ್ನಡ 
-ಸೆ.16ರಂದು ಬೆಳಗ್ಗೆ: ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್
-ಸೆ.18ರಂದು ಬೆಳಗ್ಗೆ: ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ
-ಸೆ.19ರಂದು ಬೆಳಗ್ಗೆ: ಭೂಗೋಳ ಶಾಸ್ತ್ರ
ಮಧ್ಯಾಹ್ನ: ಮನಃಶಾಸ್ತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News