ಚಿಕ್ಕಮಗಳೂರು: 5 ತಿಂಗಳ ಬಳಿಕ ನಗರದಲ್ಲಿ ಪುನಾರಂಭಗೊಂಡ ಸಂತೆ ವ್ಯಾಪಾರ

Update: 2020-08-19 17:03 GMT

ಚಿಕ್ಕಮಗಳೂರು, ಆ.19: ನಗರದಲ್ಲಿ ಕಳೆದ 5 ತಿಂಗಳಿನಿಂದ ಬಂದ್ ಆಗಿದ್ದ ಸಂತೆ ಮಾರುಕಟ್ಟೆ ಬುಧವಾರ ಪುನಾರಂಭಗೊಂಡಿತು. ಕೊರೋನ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ವಿಧಿಸಿದ್ಧ ಲಾಕ್‍ಡೌನ್ ಬಳಿಕ ವಾರದ ಸಂತೆಗೆ ನಿಷೇದ ಹೇರಿದ್ದ ಜಿಲ್ಲಾಡಳಿತ ಬುಧವಾರದಿಂದ ಕೆಲಷರತ್ತುಗಳೊಂದಿಗೆ ವರ್ತಕರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಿದೆ. ಲಾಕ್‍ಡೌನ್ ನಂತರ ಐದು ತಿಂಗಳ ಬಳಿಕ ನಗರದಲ್ಲಿ ಮೊದಲ ಸಂತೆ ವಹಿವಾಟು ಸಂತೆಮೈದಾನದಲ್ಲಿ ನಡೆಯಿತಾದರೂ ಸಂತೆ ಪುನಾರಂಭದ ಮಾಹಿತಿ ಇಲ್ಲದ ಸಾರ್ವಜನಿಕರು ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಾರದಿರುವುದೂ ಕಂಡು ಬಂತು.

ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆ ಪಕ್ಕದಲ್ಲಿರುವ ಸಂತೇಮೈದಾನದಲ್ಲಿ ಪ್ರತೀ ಬುಧವಾರ ಸಂತೇ ನಡೆಸಲು ಸಂತೇ ಮಾರುಕಟ್ಟೆ ತೆರೆಯಲಾಗಿದೆ. ಪ್ರತೀ ಬುಧವಾರ ಚಿಕ್ಕಮಗಳೂರು ಸುತ್ತಮುತ್ತ ಗ್ರಾಮೀಣ ಪ್ರದೇಶದಿಂದ ಬಾರೀ ಪ್ರಮಾಣದ ಜನರು ಆಗಮಿಸಿ ವಾರದ ಸಂತೇಯಲ್ಲಿ ತಮ್ಮಗೇ ಬೇಕಾದ ಅಗತ್ಯವಸ್ತುಗಳನ್ನು ಖರೀದಿ ವಾಪಾಸಾಗುವುದು ವಾಡಿಕೆ. ಆದರೆ, ಕೊರೋನ ಮಹಾಮಾರಿ ಜಿಲ್ಲೆಗೂ ಕಾಲಿಡುತ್ತಿದ್ದಂತೆ ಸೋಂಕು ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲಾಡಳಿತ ವಾರದ ಸಂತೆಗೆ ನಿಷೇದ ವಿಧಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿಂದ ಸಂತೇಮೈದಾನದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಈಗಾಗಲೇ ಸಂತೇ ವ್ಯಾಪಾರ ವಹಿವಾಟು ಈಗಾಗಲೇ ಆರಂಭಗೊಂಡಿದೆ. ಆದರೆ, ಸೋಂಕು ಹರಡಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಇಲ್ಲೀಯವರೆಗೂ ಸಂತೇಗೆ ಅವಕಾಶ ನೀಡಿರಲಿಲ್ಲ, ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವರ್ತಕರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸಂತೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದೆ. 

ಚಿಕ್ಕಮಗಳೂರು ನಗರದ ಸುತ್ತಮುತ್ತ ಪ್ರದೇಶದಲ್ಲಿ ಕಾಫಿತೋಟದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರತೀ ಬುಧವಾರದ ಸಂತೆಯನ್ನೇ ಅನೇಕರು ಆಶ್ರಯಿಸಿದ್ದು, ಭಾರೀ ಪ್ರಮಾಣದ ಜನರು ಸಂತೆಗೆ ಬಂದು ತಮ್ಮ ಅಗತ್ಯವಸ್ತುಗಳನ್ನು ಖರೀದಿಸುತ್ತಾರೆ. ಆದರೆ, ಬುಧವಾರದಿಂದ ಆರಂಭಗೊಂಡ ಸಂತೆಯಲ್ಲಿ ಗ್ರಾಹಕರ ಕೊರತೆ ಎದ್ದು ಕಾಣುತ್ತಿತ್ತು. 6 ತಿಂಗಳಿಂದ ಇದೇ ಮೊಲದ ಸಂತೆ ನಡೆಯುತ್ತಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಸಂತೇ ನಿಷೇದವಾಗಿದ್ದರಿಂದ ಗಾರೆಕೆಲಸಕ್ಕೆ ಹೋಗುತ್ತಿದ್ದೆ ಬುಧವಾರದಿಂದ ಸಂತೇ ಆರಂಭವಾಗಿದ್ದು, ಬಾರೀ ಪ್ರಮಾಣದಲ್ಲಿ ಗ್ರಾಹಕರ ಕೊರತೆ ಇದೆ. ಹಿಂದೇ ನಡೆಯುತ್ತಿದ್ದ ಹಬ್ಬದ ಸಂತೇಗಳಲ್ಲಿ ಎರಡರಿಂದ ಮೂರು ಸಾವಿರ ಜನರು ಗ್ರಾಮೀಣ ಮತ್ತು ನಗರ ಪ್ರದೇಶದ ಜನರು ಬರುತ್ತಿದ್ದರು ಆದರೆ. ಕೊರೋನ ನಿರ್ಬಂಧದಗಳನ್ನು ಪಾಲಿಸಿ ಸಂತೇ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಿದರು ಗ್ರಾಹಕರ ಕೊರತೆ ಇದೆ. ಸಂತೇಯಲ್ಲಿ ತರಕಾರಿ ವ್ಯಾಪಾರ ಮಾಡುವ ವರ್ತಕ ಮುಹಮದ್ ನಾಸೀರ್ ತಿಳಿಸಿದರು. 

ಮೂರು ವರ್ಷದ ಹಿಂದೇ ಬೆಂಗಳೂರು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದೆ. ಅಮ್ಮನಿಗೆ ಸಂತೆಯಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಲಸಬಿಟ್ಟು ಅಮ್ಮ ನಡೆಸುತ್ತಿದ್ದ ಸಂತೇವ್ಯಾಪಾರವನ್ನು ನಾನು ನಡೆಸಲು ಶುರು ಮಾಡಿದೇ ಲಾಕ್‍ಡೌನ್‍ನಿಂದ ಸಂತೇ ವ್ಯಾಪಾರ ನಿಲ್ಲಿಸಿದ್ದರಿಂದ ಮನೆಯಲ್ಲೇ ಇರಬೇಕಾಯಿತು. ನಂತರ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಸಂತೆ ಮತ್ತೆ ಪ್ರಾರಂಭವಾಗಿದ್ದು, ಹಬ್ಬದ ಸಂತೇ ಆಗಿರುವುದರಿಂದ 20 ಸಾವಿರ ರೂ. ಬಂಡವಾಳ ಹಾಕಿದ್ದೇನೆ. ವ್ಯಾಪಾರ ಬಹಳ ಕಡಿಮೆ ಇದೆ ಎಂದು ವ್ಯಾಪಾರಸ್ಥೆ ದೀಪಾ ತಿಳಿಸಿದರು.

ಸಂತೆ ಮೇಲ್ವಿಚಾರಣೆಗೆ ನಗರಸಭೆ ಸಿಬ್ಬಂದಿ ನೇಮಕ: ಜಿಲ್ಲಾಡಳಿತ ಕೆಲವು ನಿರ್ಬಂಧಗಳನ್ನು ವಿಧಿಸಿ ಸಂತೆ ಪ್ರಾರಂಭಿಸಲು ಅವಕಾಶ ನೀಡಿದ್ದು, ಮುಖ್ಯರಸ್ತೆಗೆ ತೊಂದರೆಯಾಗದಂತೆ, ಜನದಟ್ಟಣೆಯಾಗದಂತೆ ತಡೆಯಲು ಸಾಮಾಜಿಕ ಅಂತರ ಪಾಲನೆ ಮಾಡುವಂತೆ ಗ್ರಾಹಕರಿಗೆ ತಿಳಿಹೇಳಲು ನಗರಸಭೆಯಿಂದ ಸುನೀಲ್, ಪ್ರವೀಣ್, ಅರುಣ, ಭರತ್, ವಿಜಯ್ ಅವರನ್ನು ಮೇಲ್ಪಿಚಾರಣೆಗೆ ನೇಮಿಸಲಾಗಿತ್ತು. ಇವರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನಿಯಮಗಳನ್ನು ಪಾಲಿಸುವಂತೆ ಧ್ವನಿವರ್ಧಕದ ಮೂಲಕ ಬುಧವಾರ ಸಂತೆ ಮಾರುಕಟ್ಟೆ ಆವರಣದಲ್ಲಿ ಗ್ರಾಹಕರನ್ನು ಎಚ್ಚರಿಸುವ ಕೆಲಸ ಮಾಡಿದರು.

ಸಂತೇ ನಡೆಸಲು ವರ್ತಕರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸಂತೇಗೆ ನಿರ್ಬಂಧಗಳನ್ನು ವಿಧಿಸಿ ಆರಂಭಿಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಬೀದಿಬದಿ ವ್ಯಾಪಾರಸ್ಥರು ಮತ್ತು ಸಂತೆ ವ್ಯಾಪಾರಿಗಳು ವ್ಯಾಪಾರ ನಡೆಸಲು ಅವಕಾಶ ನೀಡಲಾಗಿದೆ. ಸಂತೆ ಮುಗಿದ ಬಳಿಕ ಆವರಣವನ್ನು ಸ್ಯಾನಿಟೈಸರ್ ಮಾಡಲಾಗುವುದು. ಪ್ರತೀದಿನ ಬೀದಿಬದಿ ವ್ಯಾಪಾರಸ್ಥರು ಸಂತೆಮೈದಾನದಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆ.
-ಬಸವರಾಜ್, ನಗರಸಭೆ ಆಯುಕ್ತ.

ಸಂತೆ ಪುನರ್ ಆರಂಭವಾಗಿರುವ ಬಗ್ಗೆ ವ್ಯಾಪಕ ಪ್ರಚಾರವಿಲ್ಲದ ಹಿನ್ನೆಲೆ ಮತ್ತು ಕೊರೊನಾ ಭಯದಿಂದ ಸಂತೆಯಲ್ಲಿ ಗ್ರಾಹಕರು ಇಲ್ಲದೇ ಭಾರೀ ಪ್ರಮಾಣದ ವ್ಯಾಪಾರ ವಹಿವಾಟು ಕಡಿಮೆ ಇದೆ ಎಂದು ವ್ಯಾಪಾರಿ ನಗರದ ಕುಂಬಾರಬೀದಿಯ ಶಾಂತ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News