×
Ad

ಕಲಬುರಗಿ: ಹಾಡಗಲೇ ಚೂರಿಯಿಂದ ಇರಿದು ಯುವಕನ ಕೊಲೆ

Update: 2020-08-20 23:26 IST

ಕಲಬುರಗಿ: ಹಾಡಗಲೇ ಚೂರಿಯಿಂದ ಇರಿದು ಯುವಕನನ್ನು ಕೊಲೆ ಮಾಡಿರುವ ಘಟನೆ ನಗರದ ಸಾರ್ವಜನಿಕ ಉದನ್ಯಾನವನದ ಬಳಿ ಇಂದು ನಡೆದಿದೆ.

ರಾಣೇಶ್ ಪೀರ್ ದರ್ಗಾ ಪ್ರದೇಶದ ನಿವಾಸಿ ವೀರೇಶ್ ಕಡಗಂಚಿ (21) ಕೊಲೆಯಾದ ಯುವಕ. ಈತ ಎಸ್.ಬಿ.ಆರ್. ಕಾಲೇಜಿನ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಮೂವರು ದುಷ್ಕರ್ಮಿಗಳು ಸಾರ್ವಜನಿಕ ಉದನ್ಯಾನವನದ ಬಳಿ, ಬೈಕ್ ನಲ್ಲಿ ಬಂದು ಚಾಕುವಿನಿಂದ ವೀರೇಶ್ ನ ತೊಡೆಗೆ ಇರಿದು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಯುವಕ ವೀರೇಶ್ ನನ್ನು ಆಸ್ಪತ್ರೆಗೆ ದಾಖಲಿಸಿದರೂ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ತುಂತುರು ಮಳೆಯ ನಡುವೆಯೇ ಜನನಿಬಿಡ ಪ್ರದೇಶದಲ್ಲಿ ಘಟನೆ ನಡೆದಿದ್ದು ಪೊಲೀಸ್ ಮತ್ತು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಸ್ಥಳಕ್ಕೆ ಬ್ರಹ್ಮಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News