ಬೀದರ್ ನ ಶಾಹೀನ್ ಶಿಕ್ಷಣ ಸಂಸ್ಥೆಗೆ 6 ರ್ಯಾಂಕ್: ಅರ್ಬಾಝ್ ಅಹ್ಮದ್, ಕಾರ್ತಿಕ್ ರೆಡ್ಡಿ ಸಾಧನೆ
Update: 2020-08-21 17:14 IST
ಬೆಂಗಳೂರು: ಪ್ರಸಕ್ತ ಸಾಲಿನ ವೃತ್ತಿ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕೆ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟಗೊಂಡಿದ್ದು, ಬೀದರ್ ನ ಶಾಹೀನ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಶನ್ ನ ಇಬ್ಬರು ವಿದ್ಯಾರ್ಥಿಗಳು 6 ರ್ಯಾಂಕ್ ಗಳನ್ನು ಗಳಿಸಿದ್ದಾರೆ.
ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ತಿಕ್ ರೆಡ್ಡಿ ಯೋಗ ಮತ್ತು ನ್ಯಾಚುರೋಪತಿ ಕೋರ್ಸ್ ನಲ್ಲಿ 4ನೆ ರ್ಯಾಂಕ್, ಪಶುಸಂಗೋಪನೆ ಕೋರ್ಸ್ ನಲ್ಲಿ 9ನೆ ರ್ಯಾಂಕ್ ಗಳಿಸಿದ್ದಾರೆ.
ಎಂ.ಡಿ. ಅರ್ಬಾಝ್ ಅಹ್ಮದ್ ಯೋಗ ಮತ್ತು ನ್ಯಾಚುರೋಪತಿ ಕೋರ್ಸ್ ನಲ್ಲಿ 10ನೆ ರ್ಯಾಂಕ್, ಪಶುಸಂಗೋಪನೆ ಕೋರ್ಸ್ ನಲ್ಲಿ 10ನೆ ರ್ಯಾಂಕ್, ಬಿ-ಫಾರ್ಮಾದಲ್ಲಿ 9ನೆ ರ್ಯಾಂಕ್ ಮತ್ತು ಡಿ ಫಾರ್ಮಾದಲ್ಲಿ 9ನೆ ರ್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ.
ಬೀದರ್ ಜಿಲ್ಲೆಯ ಎಲ್ಲಾ ರ್ಯಾಂಕ್ ಗಳು ಶಾಹೀನ್ ಸಂಸ್ಥೆಯ ಪಾಲಾಗಿವೆ.