ಸಿಇಟಿ ಪರೀಕ್ಷೆ: ಕೃಷಿ ವಿಭಾಗದಲ್ಲಿ ಮೈಸೂರಿನ ಸಂಜನಾಗೆ 2ನೇ, ಲೋಕೇಶ್ ಗೆ 3ನೇ ರ‍್ಯಾಂಕ್

Update: 2020-08-21 15:13 GMT
ಸಂಜನಾಗೆ- ಲೋಕೇಶ್ 

ಮೈಸೂರು,ಆ.21: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಕೃಷಿ ವಿಭಾಗದಲ್ಲಿ ಮೈಸೂರಿನ ಸಂಜನಾ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಗಳಿಸಿದ್ದಾರೆ.

ರ‍್ಯಾಂಕ್ ಗಳಿಸಿದ ವಿಚಾರವಾಗಿ ಖುಷಿ ಹಂಚಿಕೊಂಡ ಸಂಜನಾ, ರ‍್ಯಾಂಕ್ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆದರೂ ರ‍್ಯಾಂಕ್ ಬಂದಿರುವುದಕ್ಕೆ ಖುಷಿಯಾಗಿದೆ. ಡಾಕ್ಟರ್ ಆಗಬೇಕೆಂಬ ಆಸೆಯಿದ್ದು, ನೀಟ್ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದೇನೆ ಎಂದರು.

ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ಬೇಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಸಂಜನಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 98.33. ಅಂಕಗಳನ್ನು ಗಳಿಸಿದ್ದರು. ರಾಜ್ಯ ಸರ್ಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ವೈದ್ಯಕೀಯ, ನಾಟಾ ಮತ್ತು ಕೃಷಿ ವಿಭಾಗದಲ್ಲಿ  ಹಾಜರಾಗಲು ಅರ್ಜಿ ಸಲ್ಲಿಸಿದ್ದರು. ಇದೀಗ ಸಿಇಟಿ ಪರೀಕ್ಷೆಯ ಫಲಿತಾಂಶ ಹೊರಬಂದಿದ್ದು, ಇದರಲ್ಲಿ ಕೃಷಿ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್ ಗಳಿಸಿದ್ದಾರೆ. ಕೆ.ಸಂಜನಾ ಅವರ ತಂದೆ ಇನ್ಫೋಸಿಸ್ ಸಂಸ್ಥೆಯಲ್ಲಿ ಇಂಡಸ್ಟ್ರೀಯಲ್ ಕನ್ಸಲ್ಟಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮೂರನೇ ರ‍್ಯಾಂಕ್ ಪಡೆದ ಲೋಕೇಶ್ ಬಿ.ಜೋಗಿ
ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿ ಲೋಕೇಶ್ ಬಿ. ಜೋಗಿ ಕೃಷಿ ವಿಭಾಗದಲ್ಲಿ 3ನೇ ರ‍್ಯಾಂಕ್ ಗಳಿಸಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆಯವರಾಗಿರುವ ಲೋಕೇಶ್ ಬಿ. ಜೋಗಿ ಪಿಯುಸಿ ಪರೀಕ್ಷೆಯಲ್ಲಿ 590 ಅಂಕಗಳನ್ನು ಗಳಿಸಿದ್ದ. ಈಗ ಸಿಇಟಿ ಪರೀಕ್ಷೆಯಲ್ಲಿ ಬಿ.ಫಾರ್ಮ-23, ಡಿ.ಫಾರ್ಮಾದಲ್ಲಿ 23ನೇ ರ‍್ಯಾಂಕ್, ಪಶು ವಿಜ್ಞಾನ ವಿಭಾಗದಲ್ಲಿ 17ನೇ, ಎಂಜಿನಿಯರಿಂಗ್ ವಿಭಾಗದಲ್ಲಿ 50ನೇ ರ‍್ಯಾಂಕ್ ದೊರೆತಿದೆ.

ಈ ಕುರಿತು ಮಾತನಾಡಿದ ಲೋಕೇಶ್, ನಾನು ಮೊದಲ ಹತ್ತರಲ್ಲಿ ರ‍್ಯಾಂಕ್ ಬರಬಹುದೆಂದು ನಿರೀಕ್ಷೆ ಇಟ್ಟಿದ್ದೆ. ಆದರೆ, ಮೂರನೇ ರ‍್ಯಾಂಕ್ ಬಂದಿರೋದು ಖುಷಿಯಾಗಿದೆ. ನಾನು ನೀಟ್ ಪರೀಕ್ಷೆ ಬರೆಯುತ್ತೇನೆ. ಕೃಷಿ ವಿಭಾಗದಲ್ಲಿ ಮೂರನೇ ರ‍್ಯಾಂಕ್ ಬಂದಿರೋದು ತುಂಬಾ ಸಂತೋಷವಾಗಿದೆ. ಇದನ್ನು ನಮ್ಮ ಗುರುಗಳು ಮತ್ತು ಪೋಷಕರಿಗೆ ಅರ್ಪಿಸುವೆ ಎಂದು ಹೇಳಿದರು. ಇವರ ತಂದೆ ಬರಮಪ್ಪ ಜೋಗಿ ಅವರು ಗುತ್ತಿಗೆದಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News