×
Ad

ಪ್ರಾಣಿಗಳ ಉಗುರು, ಮೂಳೆ, ಚರ್ಮಗಳ ಸಂಗ್ರಹಿಸಿ ಮಾರಾಟ: ನಾಲ್ವರು ಆರೋಪಿಗಳ ಬಂಧನ

Update: 2020-08-21 23:01 IST

ಹನೂರು, ಆ.21: ಹುಲಿ ಮತ್ತು ಚಿರತೆಯ ಉಗುರುಗಳು, ಹುಲಿಯ ದೇಹದ ಮೂಳೆ ಸೇರಿದಂತೆ ಹಲವು ವನ್ಯಜೀವಿಗಳ ಚರ್ಮಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ 4 ಜನರನ್ನು ಬಂಧಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ತಾಲೂಕಿನ ನೆಲ್ಲಿಕತ್ತರಿ ಗ್ರಾಮದ ಮಹದೇವ (28), ಕುಮಾರ (20), ಗೊಂಬೆಗಲ್ಲು ಪೋಡಿನ ಮಹದೇವ (22), ರಂಗಸ್ವಾಮಿ (23) ಎಂಬವರನ್ನು ಬಂಧಿಸಲಾಗಿದೆ. ಈ ನಾಲ್ವರು ವನ್ಯಜೀವಿಗಳ ಮೂಳೆ, ಉಗುರು, ಚರ್ಮಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು, ಗಣೇಶ ಹಬ್ಬದ ಹಿನ್ನೆಲೆ ಅವುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು.

ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖಾ ಅಧಿಕಾರಿಗಳು ಡಿಎಫ್‍ಓ ಏಡುಕೊಂಡಲು ಮಾರ್ಗದರ್ಶನದಲ್ಲಿ ವಿವಿಧ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 4 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ವಿವಿಧ ಪ್ರಾಣಿಗಳ ಚರ್ಮ, ಮೂಳೆ ಮತ್ತು ಕೃತ್ಯಕ್ಕಾಗಿ ಬಳಸಿದ್ದ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪಿ.ಜಿ.ಪಾಳ್ಯ ವನ್ಯಜೀವಿ ವಲಯ ಅರಣ್ಯಮೊಕದ್ದಮೆ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವಶಕ್ಕೆ ಪಡೆದ ಅಧಿಕಾರಿಗಳ: ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿರುವ ನಾಲ್ವರಿಂದ ನಾಲ್ಕು ಹುಲಿ ಉಗುರು, ಒಂದು ಹುಲಿಯ ದೇಹದ ಮೂಳೆಗಳು, ಚಿರತೆಯ ಎರಡು ಉಗುರುಗಳು, ಜಿಂಕೆಯ ಎರಡು ಚರ್ಮ, ಕಾಡುಕುರಿಯ ಎರಡು ಚರ್ಮ, ಹಾರುವ ಅಳಿಲಿನ ಎರಡು ಚರ್ಮ, ಸೀಳು ನಾಯಿಯ ಮೂಳೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಕಾವೇರಿ ವನ್ಯಜೀವಿ ವಲಯದ ಎಸಿಎಫ್ ಅಂಕರಾಜು, ಆರ್ಎಫ್‍ಓಗಳಾದ ಸೈಯದ್ ಸಾಬ್ ನಧಾಫ್, ಕೆ.ಶಿವರಾಂ, ಅರುಣ್ ಕುಮಾರ್ ಅಷ್ಟಗಿ, ವಿನಯ್ ಕುಮಾರ್, ಪ್ರವೀಣ್‍ ಕುಮಾರ್, ಮಹದೇವಯ್ಯ ಹಾಗೂ ಕಾವೇರಿ ವನ್ಯಜೀವಿ ವಲಯ, ಮಲೆ ಮಹದೇಶ್ವರ ವನ್ಯಜೀವಿ ವಲಯ ಮತ್ತು ಬಿಆರ್‍ಟಿ ವಲಯದ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News