ಆಟೋ ಮೇಲೆ ಬಿದ್ದ ಭಾರೀ ಗಾತ್ರದ ಮರ: ಚಾಲಕ ಅಪಾಯದಿಂದ ಪಾರು
Update: 2020-08-22 20:22 IST
ಮೈಸೂರು,ಆ.22: ಮೈಸೂರಿನ ಆರ್.ಟಿ.ಓ ಸರ್ಕಲ್ ಬಳಿ ಆಟೋ ಮೇಲೆ ಭಾರೀ ಗಾತ್ರದ ಮರ ಬಿದ್ದು ಆಟೋ ಜಖಂಗೊಂಡ ಘಟನೆ ನಡೆದಿದೆ.
ಚಲಿಸುತ್ತಿದ್ದ ಆಟೋ ಮೇಲೆ ಏಕಾಏಕಿ ಮರ ಬಿದ್ದಿದ್ದು ಆಟೋಚಾಲಕ ಕೊದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮರ ಬಿದ್ದ ರಭಸಕ್ಕೆ ಆಟೋ ಜಖಂ ಆಗಿದೆ. ಮರ ಟೊಳ್ಳಾಗಿದ್ದ ಹಿನ್ನೆಲೆಯಲ್ಲಿ ಮರ ಬಿದ್ದಿದೆ. ಆರ್.ಟಿ.ಓ ವೃತ್ತ ಜನನಿಬಿಡ ಸ್ಥಳವಾಗಿದ್ದು ಇಂದು ಗಣೇಶ ಹಬ್ಬವಿದ್ದಿದ್ದರಿಂದ ಜನರ ಸಂಚಾರ ಹಾಗೂ ವಾಹನ ಸಂಚಾರ ಕಡಿಮೆ ಇತ್ತು.
ಎಂದಿನ ದಿನಗಳಲ್ಲಿ ಅವಘಡ ಸಂಭವಿಸಿದ್ದರೆ ಹೆಚ್ಚಿನ ಪ್ರಾಣಹಾನಿಯಾಗುವ ಸಾಧ್ಯತೆ ಇತ್ತು. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.