ಜೆಎನ್‍ಯು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಮೈಸೂರಿನ ಡಾ.ವಿಶ್ವನಾಥ್ ನೇಮಕ

Update: 2020-08-23 13:00 GMT

ಮೈಸೂರು,ಆ.23: ನವದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಭಾಷಾ ವಿಭಾಗಕ್ಕೆ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಡಾ.ವಿಶ್ವನಾಥ್ ಅವರು ನೇಮಕಗೊಂಡಿದ್ದಾರೆ.

ಭಾರತೀಯ ಭಾಷಾ ಕೇಂದ್ರ ಮತ್ತು ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರದ (ಎಸ್‍ಎಲ್‍ಎಲ್ ಅಂಡ್ ಸಿಎಸ್) ಕನ್ನಡ ಭಾಷಾ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಡಾ.ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಳಗಳರಹಳ್ಳಿ ಗ್ರಾಮದವರಾದ ವಿಶ್ವನಾಥ್, ಮೈಸೂರಿನ ಮಹಾರಾಜ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 27 ವರ್ಷದ ಭೋದನಾ ಅನುಭವ ಹೊಂದಿದ್ದು, 14 ಜನರಿಗೆ ಪಿಹೆಚ್.ಡಿ ಪ್ರಬಂಧ ಮಂಡಿಸಲು ಮಾರ್ಗದರ್ಶನ ಮಾಡಿದ್ದಾರೆ. ಈ ಹಿಂದೆ ಜೆಎನ್ ಯು ಮುಖ್ಯಸ್ಥರಾಗಿದ್ದ ಡಾ. ಪುರುಷೋತ್ತಮ ಬಿಳಿಮಲೆ ಅವರ ಅವಧಿ ಆ.20ಕ್ಕೆ ಪೂರ್ಣಗೊಂಡಿದೆ. ಮುಖ್ಯಸ್ಥರ ಹುದ್ದೆಗಾಗಿ 36 ಜನರು ಸಂದರ್ಶನದಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News