×
Ad

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 5,828ಕ್ಕೆ ಏರಿಕೆ

Update: 2020-08-23 21:35 IST

ಶಿವಮೊಗ್ಗ, ಆ.23: ಜಿಲ್ಲೆಯಲ್ಲಿ ಕೊರೋನ ತನ್ನ ಮರಣ ಮೃದಂಗ ಮುಂದುವರಿಸಿದ್ದು, ಶನಿವಾರ 5 ಹಾಗೂ ರವಿವಾರ 4 ಸೇರಿ ಒಟ್ಟು 9 ಜನ ಮೃತಪಟ್ಟಿದ್ದಾರೆ.

ಜತೆಗೆ, ಶನಿವಾರ 177 ಸೇರಿ ಎರಡು ದಿನ ಒಟ್ಟು 352 ಮಂದಿಗೆ ಸೋಂಕು ತಗಲಿದ್ದು, ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 5828ಕ್ಕೆ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ 55, ಭದ್ರಾವತಿ 57, ಶಿಕಾರಿಪುರ 57, ತೀರ್ಥಹಳ್ಳಿ 1, ಸೊರಬ 4 ಮತ್ತು ಬೇರೆ ಜಿಲ್ಲೆಯ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ರವಿವಾರ 424 ಮಂದಿಯ ಗಂಟಲು ದ್ರವ ಪರೀಕ್ಷಿಸಿದ್ದು, ಒಟ್ಟು ಇದುವರೆಗೆ 49,754 ಜನರ ಮಾದರಿ ಪರೀಕ್ಷಿಸಲಾಗಿದೆ. ಅದರಲ್ಲಿ 38,465 ನೆಗೆಟಿವ್ ಬಂದಿವೆ.

ಕೋವಿಡ್ ವಾರ್ಡ್ ಮತ್ತು ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆದು 352 ಮಂದಿ ಗುಣಮುಖರಾಗಿದ್ದು, ಈವರೆಗೆ 3626 ಜನರನ್ನು ಬಿಡುಗಡೆ ಮಾಡಲಾಗಿದೆ. 

ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ 222, ಕೋವಿಡ್ ಕೇರ್ ಸೆಂಟರ್‌ನಲ್ಲಿ 786, ಖಾಸಗಿ ಆಸ್ಪತ್ರೆಯಲ್ಲಿ 267 ಮತ್ತು ಮನೆಯಲ್ಲಿ 765 ಜನ ಆರೈಕೆಯಲ್ಲಿದ್ದು, ಜಿಎಡಿ ಆಸ್ಪತ್ರೆಯಲ್ಲಿ 65 ಸೇರಿ ಒಟ್ಟು 2105 ಸಕ್ರಿಯ ಕೊರೋನ ಪ್ರಕರಣಗಳಿವೆ. 814 ಕಂಟೈನ್‌ಮೆಂಟ್ ಝೋನ್‌ಗಳನ್ನು ಡಿನೋಟಿಫೈ ಮಾಡಿದ್ದು, ಇನ್ನೂ 2317 ಝೋನ್‌ಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News