×
Ad

ಸೆ.1ರಿಂದ ಬಾರ್, ಕ್ಲಬ್ ಆರಂಭ ಸಾಧ್ಯತೆ

Update: 2020-08-23 23:07 IST

ಬೆಂಗಳೂರು, ಆ. 23: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್ ಕೊನೆಯ ವಾರದಲ್ಲಿ ಮುಚ್ಚಿದ್ದ ಬಾರ್ ಮತ್ತು ಕ್ಲಬ್‍ಗಳನ್ನು ಸೆಪ್ಟಂಬರ್ 1ರಿಂದ ಆರಂಭಿಸುವ ಸಂಬಂಧ ಸರಕಾರ ಚಿಂತನೆ ನಡೆಸಿದ್ದು, ಈ ಕುರಿತು ಶೀಘ್ರದಲ್ಲಿಯೇ ಮಾರ್ಗಸೂಚಿಯನ್ನು ಹೊರಡಿಸುವ ಸಾಧ್ಯತೆಯಿದೆ.

ರಾಜ್ಯದ ಬೊಕ್ಕಸಕ್ಕೆ ಆದಾಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಸೆ.1 ರಿಂದ ಬಾರ್ ಹಾಗೂ ಕ್ಲಬ್‍ಗಳನ್ನು ಆರಂಭಿಸುವ ಸಂಬಂಧ ಹಣಕಾಸು ಇಲಾಖೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News