×
Ad

ಎಸ್‍ಐ, ಕಾನ್ ಸ್ಟೇಬಲ್ ಹುದ್ದೆ: ಆರಂಭಿಕ ತರಬೇತಿಗೆ ವಿನಾಯಿತಿ

Update: 2020-08-23 23:10 IST
ಪ್ರವೀಣ್‍ ಸೂದ್

ಬೆಂಗಳೂರು, ಆ. 23: ಎಸ್‍ಐ ಹಾಗೂ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗೆ ನೇಮಕಾತಿ ಹೊಂದಿ ಆರಂಭಿಕ ತರಬೇತಿ ಪಡೆದು ಸೇವೆಯಲ್ಲಿ ತೊಡಗಿರುವವರು, ಬೇರೆ ವೃಂದಕ್ಕೆ ನೇಮಕಾತಿ ಹೊಂದಿದರೆ ಮತ್ತೊಮ್ಮೆ ಆರಂಭಿಕ ತರಬೇತಿ ಪಡೆಯಬೇಕಿಲ್ಲ. ಈ ಪದ್ಧತಿಗೆ ವಿನಾಯಿತಿ ನೀಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ ಸೂದ್ ಆದೇಶಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ನಾಗರಿಕ, ರಿಸರ್ವ್, ರಾಜ್ಯ ಕೈಗಾರಿಕಾ ಭದ್ರತಾ ಪಡೆ, ರಾಜ್ಯ ಗುಪ್ತವಾರ್ತೆ, ಬೆರಳು ಮುದ್ರೆ ವೃಂದದಲ್ಲಿ ಎಸ್‍ಐ ಹಾಗೂ ಕಾನ್ ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಯಾವುದಾದರೂ ಒಂದು ವೃಂದದಲ್ಲಿ ನೇಮಕಾತಿ ಹೊಂದಿದ ಎಸ್‍ಐ ಅಥವಾ ಕಾನ್ಸ್‍ಸ್ಟೇಬಲ್ ಆರಂಭಿಕ ತರಬೇತಿ ಪೂರ್ತಿಗೊಳಿಸಬೇಕು. ಅಂತಹವರು ಬೇರೆ ವೃಂದಕ್ಕೆ ನೇಮಕಾತಿ ಹೊಂದಲು ಅವಕಾಶವಿದೆ.

ಈ ವೇಳೆ ಮತ್ತೊಮ್ಮೆ ಆರಂಭಿಕ ತರಬೇತಿ ಪಡೆದು ಸೇವೆಯಲ್ಲಿ ತೊಡಗಬೇಕಿತ್ತು. ಇದು ಅನಗತ್ಯ ಎಂಬುದನ್ನು ಪರಿಗಣಿಸಿರುವ ಪೊಲೀಸ್ ಇಲಾಖೆ ಒಮ್ಮೆ ಆರಂಭಿಕ ತರಬೇತಿ ಪಡೆದರೆ ಸಾಕು ಎಂಬ ತೀರ್ಮಾನಕ್ಕೆ ಬಂದಿದೆ. ಹೀಗಾಗಿ, ಇದಕ್ಕೆ ವಿನಾಯಿತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News