ಆ.25 ರೊಳಗೆ ಬಳಕೆ ಪ್ರಮಾಣಪತ್ರ ಸಲ್ಲಿಸಲು ಕಾಲೇಜುಗಳಿಗೆ ಸೂಚನೆ

Update: 2020-08-23 18:02 GMT

ಬೆಂಗಳೂರು, ಆ.23 : ಸರಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಶುಲ್ಕ ಮರುಪಾವತಿ ಮಾಡಿ, ಬಳಕೆ ಪ್ರಮಾಣ ಪತ್ರ ಸಲ್ಲಿಸದ ಕಾಲೇಜುಗಳು ಆ.25 ರೊಳಗೆ ಸಲ್ಲಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ.

ಹಲವು ಬಾರಿ ಪ್ರಮಾಣಪತ್ರ ಸಲ್ಲಿಸುವಂತೆ ಮನವಿ ಮಾಡಿದರೂ ಇನ್ನೂ 131 ಕಾಲೇಜುಗಳು ಸಲ್ಲಿಸಿಲ್ಲ. ಈ ಎಲ್ಲ ಕಾಲೇಜುಗಳಿಗೆ ಆ.25 ರೊಳಗೆ ಕಾಲೇಜು ಶಿಕ್ಷಣ ಇಲಾಖೆ ಇ-ಮೇಲ್ ವಿಳಾಸಕ್ಕೆ ಕಳಿಸುವಂತೆ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ಒಂದು ವೇಳೆ ಸಲ್ಲಿಕೆ ಮಾಡದಿದ್ದಲ್ಲಿ ಪ್ರಾಂಶುಪಾಲರನ್ನೇ ಹೊಣೆ ಮಾಡಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News