×
Ad

ಅನಿಲ ಭಾಗ್ಯ ಯೋಜನೆ: ಫಲಾನುಭವಿಗಳಿಗೆ ಉಚಿತ 3 ಅನಿಲ ರೀಫಿಲ್

Update: 2020-08-25 18:51 IST

ರಾಮನಗರ, ಆ.25: ಕೋವಿಡ್-19 ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಆರ್ಥಿಕ ಚೇತನ ನೀಡುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ರಾಜ್ಯ ಸರಕಾರವು ಮೂರು ಬಾರಿ ಉಚಿತವಾಗಿ ಅನಿಲ ಸಿಲಿಂಡರ್ ಗಳನ್ನು ರೀಫಿಲ್ ಮಾಡಿಕೊಡಲು ಆದೇಶ ಹೊರಡಿಸಿದೆ.

ರಾಮನಗರ ಜಿಲ್ಲೆಯ ಫಲಾನುಭವಿಗಳಿಗೆ ಈಗಾಗಲೇ ಮೊದಲ ರೀಫಿಲಿಂಗ್‍ಗೆ 585 ರೂ.ಗಳನ್ನು ಅವರ ಖಾತೆಗೆ ಆನ್‍ಲೈನ್ ಮೂಲಕ ಜಮೆ ಮಾಡಲಾಗಿದೆ. ಮೊದಲ ರೀಫಿಲಿಂಗ್ ಅನ್ನು ಉಚಿತವಾಗಿ ಪಡೆದ 21 ದಿನಗಳ ನಂತರ ಎರಡು ಮತ್ತು ಮೂರನೇ ರೀಫಿಲಿಂಗ್ ಅನ್ನು ಸಹ ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಈಗಾಗಲೇ ಫಲಾನುಭವಿಗಳ ಖಾತೆಗೆ ಜಮೆ ಆಗಿರುವ ಹಣವನ್ನು ಬಳಸಿಕೊಂಡು ಮೊದಲನೇ ರೀಫಿಲ್ ಬುಕ್ ಮಾಡದಿದ್ದ ಪಕ್ಷದಲ್ಲಿ ಎರಡನೇ ಮತ್ತು ಮೂರನೇ ರೀಫಿಲ್‍ಗೆ ಹಣ ಜಮೆಯಾಗುವುದಿಲ್ಲ. ಆದುದರಿಂದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯ ಫಲಾನುಭವಿಗಳು ಈ ಕೂಡಲೇ ತಮ್ಮ ಗ್ಯಾಸ್ ಏಜೆನ್ಸಿಯವರನ್ನು ಸಂಪರ್ಕಿಸಿ ಉಚಿತ ಅನಿಲ ರೀಫಿಲ್ ಪಡೆದುಕೊಳ್ಳುವಂತೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News