ಕೇಂದ್ರದ ಮಾರ್ಗಸೂಚಿ ಬರುವವರೆಗೂ ಶಾಲಾ-ಕಾಲೇಜು ತೆರೆಯುವುದಿಲ್ಲ: ಸಚಿವ ಸುರೇಶ್‍ ಕುಮಾರ್

Update: 2020-08-26 12:55 GMT

ಬೆಂಗಳೂರು, ಆ.26: ಕೇಂದ್ರ ಸರಕಾರದ ಮಾರ್ಗಸೂಚಿ ಬರುವವರೆಗೂ ಶಾಲಾ-ಕಾಲೇಜು ತೆರೆಯುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಈವರೆಗೂ ಶಾಲಾ- ಕಾಲೇಜುಗಳನ್ನು ತೆರೆಯವ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಿಲ್ಲ. ಎಲ್ಲಿಯವರೆಗೂ ಕೇಂದ್ರ ಸರಕಾರದಿಂದ ಮಾರ್ಗಸೂಚಿ ಹೊರಬರುವುದಿಲ್ಲವೋ, ಅಲ್ಲಿಯವರೆಗೂ ನಾವು ಶಾಲಾ-ಕಾಲೇಜುಗಳನ್ನು ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಒಮ್ಮೆ ಕೇಂದ್ರ ಸರಕಾರದಿಂದ ಮಾರ್ಗಸೂಚಿ ಹೊರಬಿದ್ದ ಬಳಿಕವೇ ಅದರ ಬಗ್ಗೆ ಚಿಂತನೆ ಮಾಡಲಾಗುತ್ತದೆ. ಈಗ ಸೆಪ್ಟೆಂಬರ್, ಅಕ್ಟೋಬರ್ ಎಂದು ನಾವು ಇಲಾಖೆಯಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರು ಅವರ ಇಲಾಖೆಯ ಬಗ್ಗೆ ಮಾತನಾಡಿದ್ದಾರೆ. ಅವರು ಶಾಲಾ-ಕಾಲೇಜುಗಳನ್ನು ಒಟ್ಟಿಗೆ ಸೇರಿಸಿ ಹೇಳಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News