×
Ad

ಜೋಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಬೆಂಗಳೂರಿನ ಯುವಕ: ರಕ್ಷಣೆ ಬಳಿಕ 'ಜ್ಞಾನೋದಯ ಆಯ್ತು' ಅಂದ

Update: 2020-08-26 19:37 IST

ಶಿವಮೊಗ್ಗ, ಆ.26: ತೀವ್ರ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಬಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಆದರೆ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರ ಸಮಯ ಪ್ರಜ್ಞೆಯಿಂದ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಬೆಂಗಳೂರಿನ ಚೇತನ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಪದವೀದರನಾಗಿರುವ ಚೇತನ್ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ತನ್ನ ಖಾಸಗಿ ವಿಚಾರವಾಗಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಮೂರು ಗಂಟೆ ಕೂತಿದ್ದ: ರಾಣಿ ಪಾಲ್ಸ್ ನಿಂದ ಜಿಗಿಯಲು ಬಂದ ಚೇತನ್ ಬಳಿಕ ಪಾಲ್ಸ್ ನ ತುದಿಯಲ್ಲಿ ಕುಳಿತಿದ್ದಾನೆ. ಮೂರು ಗಂಟೆಗಳ ಕಾಲ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮನವೊಲಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಆತ್ಮಹತ್ಯೆಗೆ ಪ್ರಯತ್ನಿದ್ದು ಏಕೆ ಎಂದು ತಿಳಿಸಿದ್ದಾನೆ. ಅಲ್ಲದೆ ರಾಣಿ ಪಾಲ್ಸ್ ಮೇಲೆ ಕುಳಿತಿದ್ದಾಗ ನನಗೆ ಜ್ಞಾನೋದಯವಾಗಿದೆ. ಹಾಗಾಗಿ ಪಾಲ್ಸ್ ಗೆ ಜಿಗಿಯಲಿಲ್ಲ ಎಂದು ತಿಳಿಸಿದ್ದಾನೆ.

ಚೇತನ್ ನನ್ನು ಜೋಗ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆತನ ಪೋಷಕರನ್ನು ಸಂಪರ್ಕಿಸಿ ಆತನನ್ನು ಮನೆಗೆ ಕಳುಹಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News