ಬಿಜೆಪಿ ಸಂಸದರೇ, ಜನರಿಗಾಗಿ ಒಂದು ಬಾರಿಯಾದರೂ ಪ್ರಧಾನಿ ಮುಂದೆ ಧ್ವನಿ ಎತ್ತಿ: ಎಸ್.ಆರ್.ಪಾಟೀಲ್

Update: 2020-08-27 13:17 GMT
Photo: Twitter

ಬೆಂಗಳೂರು, ಆ.27: ರಾಜ್ಯದಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ರಾಜ್ಯದ 25 ಬಿಜೆಪಿ ಸಂಸದರು ಪ್ರಧಾನಿ ಬಳಿ ಹೋಗಿ ರಾಜ್ಯಕ್ಕೆ ಹೆಚ್ಚಿನ ನೆರವು ಕೊಡಿಸುವ ಧೈರ್ಯ ಮಾಡಲಿ. ನಿಮ್ಮನ್ನು ಆರಿಸಿ ಕಳುಹಿಸಿರುವ ಜನರಿಗಾಗಿ ಒಂದು ಬಾರಿಯಾದರು ಪ್ರಧಾನಿ ಮುಂದೆ ಬಿಜೆಪಿ ಸಂಸದರೆ ಧ್ವನಿ ಎತ್ತಿ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷದ ಪ್ರವಾಹದಿಂದ ನಲುಗಿರುವ ಉತ್ತರ ಕರ್ನಾಟಕದ ಜನರಿಗೂ ಇನ್ನೂ ಸೂಕ್ತ ಪರಿಹಾರ ದೊರೆತಿಲ್ಲ. ಮನೆ ಕಳೆದುಕೊಂಡ ಜನರು ಇನ್ನೂ ಶೆಡ್‍ಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ಸೂರು ಕಲ್ಪಿಸಲು ಕೇಂದ್ರದಿಂದ ಹೆಚ್ಚಿನ ಅನುದಾನಕ್ಕೆ ಪ್ರಧಾನಿ ಮುಂದೆ ಬಿಜೆಪಿ ಸಂಸದರೆ ಧ್ವನಿಎತ್ತಿ ಎಂದು ಅವರು ಆಗ್ರಹಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೆ ಪಕ್ಷದ ಸರಕಾರ ಇದ್ದರೆ, ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುತ್ತದೆ ಎಂದು ಭಾಷಣ ಮಾಡಿದ್ದೀರಿ. ಈಗ ಎರಡೂ ಕಡೆ ನಿಮ್ಮದೇ ಸರಕಾರವಿದೆ. ರಾಜ್ಯದ ಕಷ್ಟಕ್ಕೆ ಸ್ಪಂದಿಸಲು ಪ್ರಧಾನಿ ಮುಂದೆ ಬಿಜೆಪಿ ಸಂಸದರೇ ಧ್ವನಿ ಎತ್ತಿ ಎಂದು ಎಸ್.ಆರ್.ಪಾಟೀಲ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News