ನೌಕರರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಿಲ್ಲ: ಹೈಕೋರ್ಟ್ ಗೆ ತಿಳಿಸಿದ ರಾಜ್ಯ ಸರಕಾರ
Update: 2020-08-27 19:54 IST
ಬೆಂಗಳೂರು, ಆ.27: ಕೊರೋನ ಕರ್ತವ್ಯದಲ್ಲಿದ್ದಾಗ ಮೃತರಾದರೆ ಸರಕಾರಿ ನೌಕರನ ಕಟುಂಬಕ್ಕೆ ನೀಡುತ್ತಿರುವ 30 ಲಕ್ಷ ಪರಿಹಾರದ ಮೊತ್ತವನ್ನು ಮತ್ತಷ್ಟು ಹೆಚ್ಚಳ ಮಾಡಲು ನಿರಾಕರಿಸಿರುವ ರಾಜ್ಯ ಸರಕಾರ, ಹಣಕಾಸಿನ ಬಿಕ್ಕಟ್ಟಿನ ಕಾರಣವನ್ನು ಹೈಕೋರ್ಟ್‍ಗೆ ತಿಳಿಸಿದೆ.
ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರ ಸರಕಾರ ನೀಡುತ್ತಿರುವ ಐವತ್ತು ಲಕ್ಷ ವಿಮಾ ಯೋಜನೆಗೆ ಸಮನಾಗಿ ಪರಿಹಾರ ನೀಡುವ ಸಾಧ್ಯತೆ ಬಗ್ಗೆ ಪರಿಗಣಿಸುವಂತೆ ಹೈಕೋರ್ಟ್ ಹೇಳಿತ್ತು.
ಆರೋಗ್ಯ ಕಾರ್ಯಕರ್ತರನ್ನು ಹೊರತುಪಡಿಸಿ ಬೇರೆ ಕೆಲಸ ಮಾಡುವ ಎಲ್ಲರಿಗೂ ರಾಜ್ಯ ಸರಕಾರ 30 ಲಕ್ಷ ಪರಿಹಾರ ನೀಡುತ್ತಿದೆ ಎಂದು ಪೀಠಕ್ಕೆ ನೀಡಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರಿಗೆ ಮತ್ತು ಗುತ್ತಿಗೆ ಆಧಾರದ ನೌಕರರಿಗೆ ವೇತನ ಪಾವತಿಸುತ್ತಿರುವುದನ್ನು ಖಚಿತಪಡಿಸುವಂತೆ ರಾಜ್ಯ ಸರಕಾರಕ್ಕೆ ಪೀಠ ನಿರ್ದೇಶನ ನೀಡಿತು. ಜೊತೆಗೆ ಸಂಬಳ ನೀಡಲು ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕೆಂದು ತಿಳಿಸಿತು.