ರಾಜ್ಯದಲ್ಲಿ ಒಂದೇ ದಿನ ದಾಖಲೆಯ 9,386 ಕೊರೋನ ಪ್ರಕರಣ ದೃಢ; 141 ಮಂದಿ ಸಾವು

Update: 2020-08-27 15:53 GMT

ಬೆಂಗಳೂರು, ಆ.27: ರಾಜ್ಯದಲ್ಲಿ ಗುರುವಾರ 9,386 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 141 ಜನರು ಸೋಂಕಿಗೆ ಬಲಿಯಾಗಿದ್ದು, 7,866 ಜನರು ಗುಣಮುಖರಾಗಿದ್ದಾರೆ.

ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 3,09,792ಕ್ಕೆ ತಲುಪಿದೆ. 747 ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 5,232ಕ್ಕೆ ತಲುಪಿದ್ದು, ಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 84,987ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

141 ಸೋಂಕಿತರು ಬಲಿ: ಬಾಗಲಕೋಟೆ 3, ಬಳ್ಳಾರಿ 6, ಬೆಳಗಾವಿ 5, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 59, ಬೀದರ್, ಚಾಮರಾಜನಗರ ಜಿಲ್ಲೆಯಲ್ಲಿ ತಲಾ 3, ದಕ್ಷಿಣ ಕನ್ನಡ 7, ಗದಗ 2, ಹಾಸನ 3, ಹಾವೇರಿ 5, ಕಲಬುರ್ಗಿ 3, ಕೊಡಗು 1, ಕೊಪ್ಪಳ 5, ಮಂಡ್ಯ 2, ಮೈಸೂರು 18, ರಾಯಚೂರು 1, ರಾಮನಗರ 2, ತುಮಕೂರು 3, ಉಡುಪಿ 1, ಉತ್ತರ ಕನ್ನಡ, ವಿಜಯಪುರ ತಲಾ 3 ಜನರು ಸಾವನ್ನಪ್ಪಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 9,386 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 121, ಬಳ್ಳಾರಿ 550, ಬೆಳಗಾವಿ 318, ಬೆಂಗಳೂರು ಗ್ರಾಮಾಂತರ 59, ಬೆಂಗಳೂರು ನಗರ 3,357, ಬೀದರ್ 76, ಚಾಮರಾಜನಗರ 36, ಚಿಕ್ಕಬಳ್ಳಾಪುರ 101, ಚಿಕ್ಕಮಗಳೂರು 229, ಚಿತ್ರದುರ್ಗ 61, ದಕ್ಷಿಣ ಕನ್ನಡ 297, ದಾವಣಗೆರೆ 391, ಧಾರವಾಡ 234, ಗದಗ 110, ಹಾಸನ 334, ಹಾವೇರಿ 117, ಕಲಬುರ್ಗಿ 232, ಕೊಡಗು 25, ಕೋಲಾರ 108, ಕೊಪ್ಪಳ 155, ಮಂಡ್ಯ 197, ಮೈಸೂರು 895, ರಾಯಚೂರು 239, ರಾಮನಗರ 105, ಶಿವಮೊಗ್ಗ 306, ತುಮಕೂರು 127, ಉಡುಪಿ 209, ಉತ್ತರ ಕನ್ನಡ 164, ವಿಜಯಪುರ 121, ಯಾದಗಿರಿ ಜಿಲ್ಲೆಯಲ್ಲಿ 112 ಪ್ರಕರಣಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News