×
Ad

ರ‍್ಯಾಪರ್ ಚಂದನ್ ಶೆಟ್ಟಿ ವಿರುದ್ಧ ಮೈಸೂರಿನಲ್ಲಿ ದೂರು ದಾಖಲು

Update: 2020-08-27 23:11 IST

ಮೈಸೂರು,ಆ.27: ಕೋಲುಮಂಡೆ ಹಾಡಿನ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿರುವ ರ‍್ಯಾಪರ್ ಚಂದನ್ ಶೆಟ್ಟಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಕೋಲುಮಂಡೆ ಹಾಡನ್ನು ವಿಕೃತಗೊಳಿಸಿ ಅಪಮಾನ ಮಾಡಿದ ಆರೋಪದ ಮೇಲೆ ರ‍್ಯಾಪರ್ ಚಂದನ್ ಶೆಟ್ಟಿ ವಿರುದ್ಧ ಮೈಸೂರಿನಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಅಂತರಾಷ್ಟ್ರೀಯ ಕಂಸಾಳೆ ಮಹದೇವಯ್ಯ ಕಲಾಸಂಘದಿಂದ ಡಿಸಿಪಿ ಪ್ರಕಾಶ್ ಗೌಡ ಅವರಿಗೆ ದೂರು ಸಲ್ಲಿಕೆಯಾಗಿದೆ. ಕಂಸಾಳೆ ಕಲಾವಿದರಾದ ಕಂಸಾಳೆ ರವಿ ಎಂಬವರು ದೂರು ನೀಡಿದ್ದಾರೆ.

ಇನ್ನು ಕೋಲುಮಂಡೆ ಹಾಡಿಗೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷಮೆ ಕೋರಿ ಮರು ಚಿತ್ರೀಕರಣ ಮಾಡುವುದಾಗಿ ಚಂದನ್ ಶೆಟ್ಟಿ ಹೇಳಿದ್ದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಂಸಾಳೆ ಕಲಾವಿದ ಹಾಡನ್ನು ಮರು ಚಿತ್ರೀಕರಣವನ್ನೂ ಮಾಡಬಾರದೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ಸೆನ್ಸಾರ್ ಮಂಡಳಿಗೂ ದೂರು ನೀಡಲು ಕಂಸಾಳೆ ಕಲಾವಿದರು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News