×
Ad

ವಿರಾಜಪೇಟೆಯಲ್ಲಿ ಅಕ್ರಮ ಲಾಟರಿ ಮಾರಾಟ: ನಾಲ್ವರ ಬಂಧನ

Update: 2020-08-29 23:02 IST

ಮಡಿಕೇರಿ, ಆ.29: ಅಕ್ರಮವಾಗಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ನಗದು ಹಾಗೂ ಮಾಲು ಸಹಿತ ಬಂಧಿಸುವಲ್ಲಿ ವಿರಾಜಪೇಟೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ಅಪ್ಪಯ್ಯಸ್ವಾಮಿ ರಸ್ತೆಯ ನಿವಾಸಿ ಪ್ರತೀಕ್(30) ಹಾಗೂ ವಿಜಯನಗರ ಬಡಾವಣೆ ನಿವಾಸಿ ಕಲೀಂ(28) ಮೊದಲ ಪ್ರಕರಣದ ಬಂಧಿತ ಆರೋಪಿಗಳು. ಬಂಧಿತರಿಂದ ರೂ.10,670 ನಗದು ಮತ್ತು ಮೊಬೈಲ್ ಫೋನ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. 

ಮತ್ತೊಂದು ಪ್ರಕರಣದಲ್ಲಿ ಕೇರಳ ರಾಜ್ಯದ ಲಾಟರಿ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿದ್ದ ನೆಹರು ನಗರದ ನಿವಾಸಿ ಎಂ.ಗಫೂರ್ (65) ಹಾಗೂ ಕೆ.ಆರ್.ನಗರದ ಕುಪ್ಪಳ್ಳಿ ಗ್ರಾಮದ ನಿವಾಸಿ ಸೋಮಾರಾವ್ 49 ಅವರನ್ನು ಮಾಂಸ ಮಾರುಕಟ್ಟೆ ಬಳಿ ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 10 ಸಾವಿರ ರೂ. ಮೌಲ್ಯದ 208 ಟಿಕೆಟ್ ಮತ್ತು ರೂ.5,310 ನಗದು ವಶ ಪಡಿಸಿಕೊಳ್ಳಲಾಗಿದೆ. 

ವಿರಾಜಪೇಟೆ ಉಪವಿಭಾಗದ ಡಿ.ವೈಎಸ್ಪಿ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಹೆಚ್.ಎಸ್.ಬೋಜಪ್ಪ, ಸಿಬ್ಬಂದಿಗಳಾದ ಎನ್.ಎಸ್.ಲೋಕೇಶ್, ಗಿರೀಶ್, ಮುಸ್ತಫಾ, ಸಂತೋಷ್, ಚಾಲಕ ಯೋಗೇಶ್ ಅವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News