ಮುಂದಿನ ತಿಂಗಳು ದಿಲ್ಲಿ ಮೆಟ್ರೋ ಪುನರಾರಂಭ, ಮಾಸ್ಕ್, ಸ್ಮಾರ್ಟ್ ಕಾರ್ಡ್ ಕಡ್ಡಾಯ

Update: 2020-08-30 08:08 GMT

ಹೊಸದಿಲ್ಲಿ, ಆ.30: ಐದು ತಿಂಗಳ ಅಂತರದ ಬಳಿಕ ದಿಲ್ಲಿ ಮೆಟ್ರೋ ಸೇವೆ ಮುಂದಿನ ತಿಂಗಳು ಪುನರಾರಂಭವಾಗಲಿದ್ದು, ಮಾಸ್ಕ್ ಹಾಗೂ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸುವುದು ಕಡ್ಡಾಯಗೊಳಿಸಲಾಗಿದೆ.

ಇಂದು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿರುವ ದಿಲ್ಲಿ ಸರಕಾರ, ರೈಲು ಪ್ರಯಾಣಕ್ಕೆ ಟೋಕನ್‌ಗಳ ನಿಷೇಧ ಹಾಗೂ ಪ್ರತಿ ಕೋಚ್‌ನಲ್ಲಿ ಸೀಮಿತ ಸಂಖ್ಯೆಯ ಪ್ರಯಾಣಿಕರು ಸೇರಿದಂತೆ ಹಲವು ನಿರ್ಬಂಧಗಳನ್ನು ಪಟ್ಟಿ ಮಾಡಲಾಗಿದೆ.

ಕೋಚ್‌ನೊಳಗೆ ಸ್ವಚ್ಛ ಗಾಳಿ ಇರುವುದನ್ನು ದೃಢಪಡಿಸಲು ರೈಲಿನಲ್ಲಿ ಏರ್‌ಕಂಡೀಶನ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ದಿಲ್ಲಿಯ ಸಾರಿಗೆ ಚಿವ ಕೈಲಾಶ್ ಗಹ್ಲೋಟ್ ತಿಳಿಸಿದ್ದಾರೆ.

  "ಮೆಟ್ರೋ ರೈಲು ಎಲ್ಲ ಸ್ಟೇಶನ್‌ಗಳಲ್ಲಿ ನಿಲ್ಲುವುದಿಲ್ಲ. ಹಂತಹಂತವಾಗಿ ಸ್ಟೇಶನ್‌ಗಳನ್ನು ತೆರೆಯುವ ಯೋಜನೆ ಇದೆ. ಸ್ಟೇಶನ್‌ಗಳಲ್ಲಿ ಸುರಕ್ಷಿತ ಅಂತರ ಹಾಗೂ ಥರ್ಮಲ್ ತಪಾಸಣೆ ಸಹಿತ ಎಲ್ಲ ಸುರಕ್ಷಿತ ನಿಯಮಗಳನ್ನು ಗಮನಿಸಲಾಗುವುದು.ಹ್ಯಾಂಡ್ ಸ್ಯಾನಿಟೈಸರ್ ಒದಗಿಸಲಾಗುವುದು. ಟೋಕನ್ ಸಿಸ್ಟಮ್‌ನಿಂದ ಕೊರೋನ ಹರಡುವ ಭೀತಿ ಇರುವ ಕಾರಣ ಇದನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ''ಎಂದು ಕೈಲಾಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News