ಪ್ರತಿ ಜಿಲ್ಲೆಗೊಂದು ಪ್ಲಾಸ್ಮಾ ಬ್ಯಾಂಕ್ ಆರಂಭಿಸಲು ಈಶ್ವರ್ ಖಂಡ್ರೆ ಒತ್ತಾಯ

Update: 2020-08-31 12:50 GMT

ಬೆಂಗಳೂರು, ಆ.31: ಪ್ರತಿ ಜಿಲ್ಲೆಗೊಂದು ಪ್ಲಾಸ್ಮಾ ಬ್ಯಾಂಕ್ ಆರಂಭಿಸಿ, ಕೊರೋನ ಸೋಂಕಿತರ ಜೀವ ಉಳಿಸಿ. ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಮತ್ತು ಮರಣ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತತ್‍ಕ್ಷಣವೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಿ, ರೋಗಿಗಳ ಜೀವ ಉಳಿಸುವಂತೆ ಆರೋಗ್ಯ ಸಚಿವ ಬಿ.ಶ್ರೀರಾಮುಲುಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ.

ಕೆಪಿಎಸ್ಸಿ ಕರ್ನಾಟಕ ಆಡಳಿತ ಸೇವೆಯ ಉನ್ನತ ಹುದ್ದೆಗಳಿಗೆ 2011ರ ತಂಡದ ಆಯ್ಕೆಪಟ್ಟಿಯನ್ನು 2013ರಲ್ಲಿ ಪ್ರಕಟಿಸಿದ್ದರೂ ಈವರೆಗೆ ನೇಮಕಾತಿ ಆಗಿಲ್ಲ. ಕೊರೋನ ಬಿಕ್ಕಟ್ಟಿನ ಸಂದರ್ಭದಲ್ಲಿ ಆಯಕಟ್ಟಿನ ಸ್ಥಾನದಲ್ಲಿ ಅಧಿಕಾರಿಗಳ ಕೊರತೆಯಿಂದ ಆಗುತ್ತಿರುವ ತೊಂದರೆಯೂ ಈ ನೇಮಕಾತಿಯಿಂದ ಬಗೆಹರಿಯುತ್ತದೆ. ಸರಕಾರ ಸದನದಲ್ಲಿ ಭರವಸೆ ನೀಡಿದ್ದಂತೆ ಕೂಡಲೆ ನೇಮಕಾತಿ ಪತ್ರ ನೀಡಿ, ಸ್ಥಳ ನಿಯೋಜನೆ ಮಾಡುವಂತೆ ಅವರು ಮುಖ್ಯಮಂತ್ರಿಯನ್ನು ಟ್ವೀಟ್‍ನಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News