ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1458ಕ್ಕೆ ಏರಿಕೆ; 1178 ಮಂದಿ ಗುಣಮುಖ
ಮಡಿಕೇರಿ, ಆ.31: ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1458 ಕ್ಕೆ ಏರಿಕೆಯಾಗಿದ್ದು, 1178 ಮಂದಿ ಗುಣಮುಖರಾಗಿದ್ದಾರೆ. 259 ಸಕ್ರಿಯ ಪ್ರಕರಣಗಳಿದ್ದು, 21 ಮಂದಿ ಮರಣ ಹೊಂದಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 245 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ 8 ಗಂಟೆ ವೇಳೆಗೆ 15 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 16 ಸೇರಿದಂತೆ ಒಟ್ಟು 31 ಹೊಸ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಸುಂಟಿಕೊಪ್ಪ ಶ್ರೀದೇವಿ ಲೇಔಟಿನ 27 ವರ್ಷದ ಮಹಿಳೆ, ಸೋಮವಾರಪೇಟೆ ಕುಸ್ಬೂರು ಗ್ರಾಮ ಮತ್ತು ಅಂಚೆಯ ಗಾಲ್ಫ್ ಮೈದಾನ ಸಮೀಪದ 70 ವರ್ಷದ ಪುರುಷ, ಸೋಮವಾರಪೇಟೆ ಕವಡಿಕಟ್ಟೆಯ 26 ವರ್ಷದ ಮಹಿಳೆ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮೈಸೂರಿನ 58 ವರ್ಷದ ಮಹಿಳೆ, 61 ವರ್ಷದ ಪುರುಷ ಮತ್ತು 26 ವರ್ಷದ ಮಹಿಳೆ.
ಸೋಮವಾರಪೇಟೆ ಬಸವೇಶ್ವರ ರಸ್ತೆಯ ಶ್ರೀಹರಿ ಸ್ಟೋರ್ಸ್ ಸಮೀಪದ 48 ವರ್ಷದ ಪುರುಷ. ಮಡಿಕೇರಿ ಮೈತ್ರಿ ಹಾಲ್ ಸಮೀಪದ ಪೊಲೀಸ್ ವಸತಿಗೃಹದ 29 ಮತ್ತು 28 ವರ್ಷದ ಇಬ್ಬರು ಪುರುಷರು. ಮಡಿಕೇರಿ ತ್ಯಾಗರಾಜ ನಗರದ ಅಂಗನವಾಡಿ ಬಳಿಯ 48 ವರ್ಷದ ಮಹಿಳೆ. ಮಡಿಕೇರಿ ಚೈನ್ ಗೇಟ್ ಸಮೀಪದ ಪೊಲೀಸ್ ವಸತಿಗೃಹದ 34 ವರ್ಷದ ಪುರುಷ. ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಬಳಿಯ 55 ವರ್ಷದ ಪುರುಷ. ನಾಪೋಕ್ಲುವಿನ ಹಳೆತಾಲೂಕಿನ 42 ವರ್ಷದ ಪುರುಷ. ಮಡಿಕೇರಿ ಖಾಸಗಿ ಬಸ್ ನಿಲ್ದಾಣ ಬಳಿಯ 25 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ನಗರದ ಗೌಳಿಬೀದಿಯ 43 ವರ್ಷದ ಪುರುಷ. ಸಿದ್ದಾಪುರದ ಮಟ್ಟ ಗ್ರಾಮದ ಮುತ್ತಪ್ಪ ದೇವಾಲಯ ಬಳಿಯ 15 ವರ್ಷದ ಮಹಿಳೆ. ಸೋಮವಾರಪೇಟೆ ವಾಲ್ನೂರು ಅಂಚೆಯ ತ್ಯಾಗತ್ತೂರು ಬಸ್ ನಿಲ್ದಾಣ ಬಳಿಯ 62 ವರ್ಷದ ಮಹಿಳೆ. ವಿರಾಜಪೇಟೆ ಮೀನುಪೇಟೆಯ ಮಲಬಾರ್ ರಸ್ತೆಯ ಹೊಸ ಅರ್ಜಿ ಸೇತುವೆ ಬಳಿಯ 40 ವರ್ಷದ ಪುರುಷ. ಗೋಣಿಕೊಪ್ಪದ ಅರವತ್ತೊಕ್ಲುವಿನ ಮೈಸೂರಮ್ಮ ನಗರದ 65 ವರ್ಷದ ಪುರುಷ. ವಿರಾಜಪೇಟೆ ಕಾಕೋಟುಪರಂಬು ಅಂಚೆಯ ನಾಲ್ಕೇರಿ ಗ್ರಾಮದ 33 ವರ್ಷದ ಮಹಿಳೆ. ಗುಡ್ಡೆಹೊಸೂರು ಮಾದಾಪಟ್ಟಣದ 31 ವರ್ಷದ ಪುರುಷ. ಸೋಮವಾರಪೇಟೆ ಅಬ್ಬೂರುಕಟ್ಟೆ ಬಳಿಯ 69 ವರ್ಷದ ಪುರುಷ.
ಶಿರಂಗಾಲ ತೊರೆನೂರಿನ ರೇಷ್ಮೆ ಹುಳು ಸಾಕಾಣಿಕೆ ಕೇಂದ್ರ ಬಳಿಯ 58 ವರ್ಷದ ಮಹಿಳೆ ಮತ್ತು 68 ವರ್ಷದ ಪುರುಷ. ಶಿರಂಗಾಲ ಕಾಡಬಸವೇಶ್ವರ ದೇವಾಲಯ ಬಳಿಯ 50 ಮತ್ತು 28 ವರ್ಷದ ಮಹಿಳೆಯರು. ಮಡಿಕೇರಿ ಬೊಯಿಕೇರಿಯ ಇಬ್ನಿವಳವಾಡಿಯ ಬಿ.ಎಸ್.ಎನ್.ಎಲ್ ಟವರ್ ಬಳಿಯ 46 ವರ್ಷದ ಮಹಿಳೆ. ಕುಶಾಲನಗರ ಹೆಬ್ಬಾಲೆ ಮುಖ್ಯ ರಸ್ತೆಯ ಕೆನರಾ ಬ್ಯಾಂಕ್ ಎದುರಿನ 93 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮೈಸೂರು ಬೈಲುಕೊಪ್ಪದ 58 ವರ್ಷದ ಮಹಿಳೆ. ಗೋಣಿಕೊಪ್ಪ ಟೆಲಿಫೋನ್ ಎಕ್ಸ್ ಚೇಂಜ್ ಬಳಿಯ 50 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.