ಡ್ರಗ್ಸ್ ಮಾಫಿಯಾದಲ್ಲಿ ನನ್ನ ಮಗನಿದ್ದರೂ ಸುಮ್ಮನೆ ಬಿಡಲ್ಲ: ಸಚಿವ ಪ್ರಭು ಚೌಹಾಣ್

Update: 2020-09-01 16:33 GMT

ಯಾದಗಿರಿ, ಸೆ.1: ಡ್ರಗ್ಸ್ ಮಾಫಿಯಾದಲ್ಲಿ ನನ್ನ ಮಗನಿದ್ದರೂ, ಸರಕಾರ ಸುಮ್ಮನೆ ಬಿಡಲ್ಲ ಎಂದು ಸಚಿವ ಪ್ರಭು ಚೌಹಾಣ್ ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾ ವಿರುದ್ಧ ಕ್ರಮಕ್ಕೆ ಸರಕಾರ ಬದ್ಧವಿದೆ. ನಮ್ಮ ಸರಕಾರ ಯಾವುದೇ ಕಾರಣಕ್ಕೂ ಪ್ರಕರಣ ಮುಚ್ಚಿ ಹಾಕಲ್ಲ. ತಪ್ಪು ಮಾಡಿದರೆ ನನ್ನನ್ನೂ ಶಿಕ್ಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯೇ ಹೇಳಿದ್ದಾರೆ ಎಂದರು.

ಭಾರತ ದೇಶದಲ್ಲಿ ಸಂವಿಧಾನವೇ ಮೊದಲು. ಸಂವಿಧಾನದ ಎದುರು ಯಾರೂ ದೊಡ್ಡವರಲ್ಲ ಎಂದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೆಲಸವಿಲ್ಲ. ಅದಕ್ಕೆ ಇಂತಹ ಆರೋಪ ಮಾಡುತ್ತಾರೆ. ಬರೀ ಸುಳ್ಳು ಮಾತನಾಡುತ್ತಾರೆ, ಅವರ ಆರೋಪವೆಲ್ಲಾ ಸುಳ್ಳು ಎಂದು ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News