×
Ad

ರಾಜ್ಯದ 39 ಮಠಗಳಿಗೆ ಸಮಾನ ಅನುದಾನ ಹಂಚಿಕೆಗೆ ಸರಕಾರ ನಿರ್ಧಾರ

Update: 2020-09-02 18:25 IST

ಬೆಂಗಳೂರು, ಸೆ.2: ಹಿಂದಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ರಾಜ್ಯದ ಆಯ್ದ 39 ಮಠಗಳಿಗೆ ನೀಡಿದ್ದ 60 ಕೋಟಿಯನ್ನು ದೇವಸ್ಥಾನಗಳಿಗೆ ಮರು ಹಂಚಿಕೆ ಮಾಡಿರುವ ಇಂದಿನ ಸರಕಾರ ಅದೇ ಮಠಗಳಿಗೆ ತಲಾ 1 ಕೋಟಿಯಂತೆ 39 ಕೋಟಿ ರೂ. ನೀಡಲು ಮುಂದಾಗಿದೆ.

ಕೊರೋನ ಕಾರಣದಿಂದ ಮಠಗಳು ಆರ್ಥಿಕ ಸಂಕಷ್ಟದಲ್ಲಿವೆ. ಆದುದರಿಂದಾಗಿ ಹಿಂದಿನ ಸರಕಾರ ಅನುದಾನ ಘೋಷಣೆ ಮಾಡಿದ್ದ ಎಲ್ಲ ಮಠಗಳಿಗೂ ಸಮಾನವಾದ ಅನುದಾನ ಹಂಚಿಕೆ ಮಾಡಲು ಸರಕಾರ ತೀರ್ಮಾನ ಮಾಡಿದೆ ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದಾಗಿ ಯಾವುದೇ ಯೋಜನೆ ಅಥವಾ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಅನುಮತಿ ಅಗತ್ಯ. ಅದಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಸಾಮಾನ್ಯ ಯೋಜನೆಯಡಿ ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಸಂಸ್ಥೆಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ನಿರ್ಮಾಣಗಳಿಗೆ ಪ್ರಸಕ್ತ ಸಾಲಿನಲ್ಲಿ 26 ಕೋಟಿ ನೀಡಲಾಗಿದೆ. ಈ ಅನುದಾನದಿಂದ 10 ಕೋಟಿಯನ್ನು ಬಳಸಿ, ಒಟ್ಟು 39 ಕೋಟಿ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News