ಜಿಎಸ್‍ಟಿ ತೆರಿಗೆ ಪಾಲು ರಾಜ್ಯದ ಹಕ್ಕು, ಕೇಂದ್ರದ ಭಿಕ್ಷೆ ಅಲ್ಲ: ಈಶ್ವರ್ ಖಂಡ್ರೆ

Update: 2020-09-02 13:22 GMT

ಬೆಂಗಳೂರು, ಸೆ.2: ರಾಜ್ಯದ ಜಿಎಸ್‍ಟಿ ತೆರಿಗೆ ಪಾಲು ನಮ್ಮ ರಾಜ್ಯದ ಹಕ್ಕು. ಕೇಂದ್ರ ಸರಕಾರ ಕೊಡುವ ಭಿಕ್ಷೆ ಅಲ್ಲ. ನಮ್ಮ ಪಾಲಿನ ಹಣವನ್ನ ನಾವು ಕೇಳಿದರೆ ರಿಸರ್ವ್ ಬ್ಯಾಂಕ್ ಬಳಿ ಸಾಲ ಕೇಳಿ ಅಂತಿದೆ ನರೇಂದ್ರ ಮೋದಿ ಸರಕಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯದಿಂದ ಆಯ್ಕೆಯಾದ 25 ಬಿಜೆಪಿ ಸಂಸದರೇ ಈಗ ಎಲ್ಲಿದ್ದೀರಿ? ಅಂಜುಬುರುಕತನ ಬಿಟ್ಟು ಕನಿಷ್ಠ ಪ್ರಧಾನಿ ಬಳಿ ಮಾತನಾಡಿ ನಮ್ಮ ಪಾಲಿನ ತೆರಿಗೆ ಹಣ ಕೊಡಿಸಿ ನ್ಯಾಯ ಒದಗಿಸುವಿರಾ? ಉತ್ತರಿಸಿ ಎಂದು ಪ್ರಶ್ನಿಸಿದ್ದಾರೆ.

ನಾವು ಹೇಳಿದರೆ ಆರೋಪ ನಿಮಗೆ ನೀವೆ ಹೇಳಿಕೊಂಡರೆ ಆನಂದನಾ? ಅಂದು ನೀವಾಡಿದ ಮಾತು ನಿಮಗೆ ನೆನಪಿಸುತ್ತಿದ್ದೇವೆ ಅಷ್ಟೇ ಸರ್ ಎಂದು ಪ್ರಧಾನಿ ನರೇಂದ್ರ ಮೋದಿ 2016ರ ಎ.7ರಂದು ಸಾರ್ವಜನಿಕ ಸಮಾವೇಶವೊಂದರಲ್ಲಿ ‘ಇದು ಆ್ಯಕ್ಟ್ ಆಫ್ ಗಾಡ್ ಅಲ್ಲ ಆ್ಯಕ್ಟ್ ಆಫ್ ಫ್ರಾಡ್’ ಎಂದು ಹೇಳಿರುವ ವಿಡಿಯೋ ತುಣುಕನ್ನು ಹಾಕಿ ಬಿಜೆಪಿಯವರಿಗೆ ಈಶ್ವರ್ ಖಂಡ್ರೆ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News