ಯುಜಿಸಿಇಟಿ-2020: ದಾಖಲೆಗಳ ಅಪ್‍ಲೋಡ್ ಮಾಡುವ ಪ್ರಕ್ರಿಯೆ ಮುಂದೂಡಿಕೆ

Update: 2020-09-02 17:26 GMT

ಬೆಂಗಳೂರು, ಸೆ.2: ಜೆಇಇ ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳ ಮನವಿಯ ಮೇರೆಗೆ ಸೆ.2ರಿಂದ ಪ್ರಾರಂಭವಾಗಬೇಕಾಗಿದ್ದ ಯುಜಿಸಿಇಟಿ-2020 ಮೂಲ ದಾಖಲೆಗಳನ್ನು ಅಪ್‍ಲೋಡ್ ಮಾಡುವ ಪ್ರಕ್ರಿಯೆಯನ್ನು ಸೆ.6ರವರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಯುಜಿಸಿಇಟಿ 2020ಕ್ಕೆ ದಾಖಲೆಗಳನ್ನು ಅಪ್‍ಲೋಡ್ ಮಾಡುವ ಪರಿಷ್ಕೃತ ವೇಳಾಪ್ಟಟಿಯನ್ನು ಸೆ.5ರಂದು ಪ್ರಾಧಿಕಾರದ ವೆಬ್‍ಸೈಟ್ http://kea.kar.nic.in ನಲ್ಲಿ ಪ್ರಕಟಿಸಲಾಗುವುದು. ದಾಖಲಾತಿ ಪರಿಶೀಲನೆಗಾಗಿ ಯಾವುದೇ ಸಹಾಯಕ ಕೇಂದ್ರಗಳು ಮತ್ತು ಬೆಂಗಳೂರು ಕಚೇರಿಗೆ ಬರುವಂತಹ ಅಗತ್ಯ ಇರುವುದಿಲ್ಲವೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News