×
Ad

ಸೆ.4 ರಿಂದ ಕರ್ನಾಟಕ-ಗೋವಾ ನಡುವೆ ಸಾರಿಗೆ ಸಂಚಾರ ಪ್ರಾರಂಭ

Update: 2020-09-03 21:40 IST
ಸಾಂದರ್ಭಿಕ ಚಿತ್ರ

ಬೆಳಗಾವಿ, ಸೆ.3: ಕೋವಿಡ್-19 ಹಿನ್ನೆಲೆಯಲ್ಲಿ ಅಂತರ್ ರಾಜ್ಯ ಸಾರಿಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಸೆ.4 ರಿಂದ ಪುನಃ ಕರ್ನಾಟಕ-ಗೋವಾ ರಾಜ್ಯಗಳ ನಡುವೆ ಸಾರಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್.ಮುಂಜಿ ತಿಳಿಸಿದ್ದಾರೆ.

ಅಂತರ್ ರಾಜ್ಯ ಸಾರಿಗೆ ಕಾರ್ಯಾಚರಣೆಗೆ ವಿಧಿಸಲಾದ ನಿಬಂಧನೆಯನ್ನು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಸೆ.4 ರಿಂದ ಬೆಳಗಾವಿ-ಗೋವಾ ಮಾರ್ಗದ ಸಾರಿಗೆಗಳನ್ನು ಕೋವಿಡ್-19 ಅವಧಿಗಿಂತ ಪೂರ್ವದಲ್ಲಿರುವಂತೆ ಯಥಾಪ್ರಕಾರವಾಗಿ ಅದೇ ಸಮಯದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News