ಮೈಸೂರು: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಪಿಡಿಒ
Update: 2020-09-03 22:21 IST
ಮೈಸೂರು,ಸೆ.3: ಕೃಷಿ ಗುಂಡಿಗೆ ಹಣ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಬನ್ನೂರು ಟಿ.ನರಸೀಪುರ ತಾಲೂಕು ಯಾಚೇನಹಳ್ಳಿ ಪಿಡಿಒ ಚಂದ್ರಶೇಖರ್ ಎಂಬವರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.
ಯಾಚೇನಹಳ್ಳಿ ಗ್ರಾಮದ ಹೇಮಂತ್ ಕುಮಾರ್ ಎಂಬವರಿಂದ ಪಿಡಿಒ ಚಂದ್ರಶೇಖರ್ ಕೃಷಿ ಗುಂಡಿಗೆ ಹಣ ಮಂಜೂರು ಮಾಡಲು 20 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ವಿಷಯನ್ನು ಎಸಿಬಿ ಅಧಿಕಾರಿಗಳಿಗೆ ಹೇಮಂತ್ ಕುಮಾರ್ ತಿಳಿಸಿದ್ದರು. ಗುರುವಾರ ಹಣ ನೀಡುವ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.
ಎಸಿಬಿ ಎಸ್ಪಿ ರಶ್ಮಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪರುಶರಾಮಪ್ಪ, ಇನ್ಸ್‍ಪೆಕ್ಟರ್ ಕರೀಂ ರಾವ್ತರ್, ನಿರಂಜನ್ ಕುಮಾರ್ ದಾಳಿ ನಡೆಸಿದ್ದಾರೆ. ಸಿಬ್ಬಂದಿಗಳಾದ ಗುರುಪ್ರಸಾದ್, ಮಂಜುನಾಥ್, ಯೋಗಿಶ್, ಚೇತನ್ ಮತ್ತು ತೌಸಿಫ್ ತನಿಖೆ ಕಾರ್ಯದಲ್ಲಿದ್ದರು.