×
Ad

ತಾನು ಕೆಲಸ ಮಾಡಿದ್ದ ಅಂಗಡಿಯಲ್ಲೇ 43 ಮೊಬೈಲ್ ಕಳ್ಳತನ ಮಾಡಿದ್ದ ಆರೋಪಿ ಬಂಧನ

Update: 2020-09-03 23:15 IST

ಮೈಸೂರು,ಸೆ.3: ತಾನು ಕೆಲಸ ಮಾಡಿ ನಂತರ ಬಿಟ್ಟಿದ್ದ ಕಚೇರಿಗೆ ಕನ್ನ ಹಾಕಿ ಒಟ್ಟು 43 ಮೊಬೈಲ್ ಗಳನ್ನ ಎಗರಿಸಿದ್ದ ಆರೋಪಿಯನ್ನು ಮೈಸೂರಿನ ಪೊಲೀಸರು ಬಂಧಿಸಿದ್ದಾರೆ.

ಹುಣಸೂರು ತಾಲೂಕಿನ ಮೂಡಲಕೊಪ್ಪಲು ಗ್ರಾಮದ ಕೃಷ್ಣೇಗೌಡ(22) ಬಂಧಿತ ಆರೋಪಿ. ಬಂಧಿತನಿಂದ 6.5 ಲಕ್ಷ ಮೌಲ್ಯದ 43 ಮೊಬೈಲ್ ಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಮೋಟರ್ ಬೈಕ್ ಅನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಆರೋಪಿ ಕೃಷ್ಣೇಗೌಡ ಟಿ. ನರಸೀಪುರ ಟೌನ್, ಹೆಳವರ ಹುಂಡಿ ಗ್ರಾಮದಲ್ಲಿರುವ ಸ್ವಂದನ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈ ನಡುವೆ ಕಳೆದ ಒಂದುವರೇ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ ಈತ ಕಚೇರಿಯ ಬೀಗವನ್ನ ಯಾರಿಗೂ ಗೊತ್ತಾಗದ ರೀತಿಯಲ್ಲಿ ತೆಗೆದುಕೊಂಡು ಹೋಗಿದ್ದ. ಬಳಿಕ ಪ್ಲಾನ್ ರೂಪಿಸಿ ಸ್ವಂದನ ಫೈನಾನ್ಸ್ ಕಚೇರಿಯ ಮುಂಭಾಗದ ಬಾಗಿಲಿನ ಬೀಗವನ್ನ ಹಾರೆಯಿಂದ ಮೀಟಿ ನಂತರ ನಕಲಿ ಕೀ ಬಳಸಿ ಕಚೇರಿಯಲ್ಲಿದ್ದ 43 ಮೊಬೈಲ್ ಗಳನ್ನ ಕಳ್ಳತನ ಮಾಡಿದ್ದ. ಈ ಕುರಿತು ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಂತರ ಆರೋಪಿ ಬಂಧನಕ್ಕೆ ಮೈಸೂರು ಎಸ್ಪಿ ರಿಷ್ಯಂತ್, ಅಪರ ಪೊಲೀಸ್ ಅಧೀಕ್ಷಕರಾದ ಶಿವಕುಮಾರ್ ಮಾರ್ಗದರ್ಶನದಲ್ಲಿ ಟಿ ನರಸೀಪುರ ಸಿಪಿಐ ಲವ ಹಾಗೂ ಪಿಎಸ್ಐ ಮಂಜು ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಇದೀಗ ಪೊಲೀಸರು ಆರೋಪಿಯನ್ನ ಹೆಡೆಮುರಿ ಕಟ್ಟಿದ್ದು, ತಾನು ಮಾಡಿದ ಕೃತ್ಯದ ಬಗ್ಗೆ ಆರೋಪಿ ಕೃಷ್ಣೇಗೌಡ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News