×
Ad

ಗಾಂಜಾವನ್ನು ತುಳಸಿ ಗಿಡಕ್ಕೆ ಹೋಲಿಸಿದ್ದ ಆರೋಪ: ನಟಿ ವಿರುದ್ಧ ಎಫ್‍ಐಆರ್

Update: 2020-09-04 17:23 IST

ಬೆಂಗಳೂರು, ಸೆ.4: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪಕ್ಕೆ ಸಂಬಂಧಿಸಿದಂತೆ ಗಾಂಜಾ ತುಳಸಿ ಗಿಡ ಇದ್ದಂತೆ ಎಂದು ವಿವಾದಿತ ಹೇಳಿಕೆ ನೀಡಿದ್ದ ನಟಿ ನಿವೇದಿತಾ ವಿರುದ್ಧ ಇಲ್ಲಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದೆ.

ಗಾಂಜಾ ಸೇವನೆ ತಪ್ಲಲ್ಲ. ಗಾಂಜಾ ಗಿಡ ತುಳಸಿ ಗಿಡಕ್ಕೆ ಸಮ ಎಂದು ಹೇಳಿದ್ದರು. ಈ ಹೇಳಿಕೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಎ.ದೀಪಕ್ ಎಂಬುವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರು ಆಧರಿಸಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News