ಫೇಸ್ ಬುಕ್ ನಲ್ಲಿ ಸಾವಿನ ನೇರ ಪ್ರಸಾರ ಮಾಡಲಿರುವ 57 ವರ್ಷದ ವ್ಯಕ್ತಿ!
Update: 2020-09-04 20:07 IST
ಪ್ಯಾರಿಸ್: ಗುಣವಾಗದ ಕಾಯಿಲೆಯಿಂದ ಬಳಲುತ್ತಿರುವ ಫ್ರಾನ್ಸ್ ನಾಗರಿಕ, 57 ವರ್ಷದ ಅಲೈನ್ ಕೊಖ್ ಎಂಬವರು ಫೇಸ್ ಬುಕ್ ನಲ್ಲಿ ತಮ್ಮ ಸಾವಿನ ನೇರ ಪ್ರಸಾರ ಮಾಡುವ ಉದ್ದೇಶ ಹೊಂದಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರಾನ್ ಅವರು ಅಲೈನ್ ಅವರ ದಯಾಮರಣ ಅಪೀಲನ್ನು ಈ ಮೊದಲು ತಿರಸ್ಕರಿಸಿದ್ದರು.
ಇದೀಗ ಅಲೈನ್ ಯಾವುದೇ ಆಹಾರ ಮತ್ತು ಔಷಧಿ ಸೇವಿಸುವುದನ್ನೂ ನಿಲ್ಲಿಸಿದ್ದಾರೆ.
ಹೃದಯದ ಕವಾಟಗಳ ರಕ್ತನಾಳಗಳು ಪರಸ್ಪರ ಅಂಟಿಕೊಳ್ಳುವ ಅತ್ಯಂತ ವಿರಳ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ತಾವು ಇನ್ನು ಹೆಚ್ಚೆಂದರೆ ಒಂದು ವಾರ ಬದುಕುಳಿಯಬಹುದು ಎಂದು ಅಂದುಕೊಂಡಿರುವ ಅವರು ಶನಿವಾರ ಬೆಳಿಗ್ಗೆ ತನ್ನ ಸಾವಿನ ನೇರ ಪ್ರಸಾರವನ್ನು ಫೇಸ್ ಬುಕ್ ಮುಖಾಂತರ ಮಾಡಲಿರುವುದಾಗಿ ಹೇಳಿಕೊಂಡಿದ್ದಾರೆ.