×
Ad

ಯರಮರಸ್ ವೈಟಿಪಿಎಸ್‍ನಲ್ಲಿ ಬೆಂಕಿ ಅವಘಡ: ಕೋಟಿ ರೂ. ಮೌಲ್ಯದ ಉಪಕರಣ ಭಸ್ಮ

Update: 2020-09-04 20:30 IST
ಸಾಂದರ್ಭಿಕ ಚಿತ್ರ

ರಾಯಚೂರು, ಸೆ.4: ರಾಯಚೂರು ತಾಲೂಕಿನ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ(ವೈಟಿಪಿಎಸ್)ದ 2ನೆ ಘಟಕದ ವಿದ್ಯುತ್ ಟ್ರಾನ್ಸ್‍ಪಾರ್ಮರ್ ಶುಕ್ರವಾರ ಬೆಳಗ್ಗೆ ಬೆಂಕಿ ಹೊತ್ತಿ ಉರಿದಿದೆ.

ಈ ಅವಘಡದಲ್ಲಿ ಒಂದು ಕೋಟಿ ರೂ. ಮೊತ್ತದ ಉಪಕರಣಗಳು ಸುಟ್ಟುಹೋಗಿವೆ. ಆರ್‍ಟಿಪಿಎಸ್, ವೈಟಿಪಿಎಸ್ ಬೆಂಕಿ ನಂದಿಸುವ ವಿಭಾಗದವರು ಹಾಗೂ ರಾಯಚೂರು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

800 ಮೆಗಾವಾಟ್ ವಿದ್ಯುತ್ ಘಟಕದ ಉತ್ಪಾದನೆ ಆರಂಭಕ್ಕೆ ಸಿಂಕ್ರೇಷನ್ ಮಾಡುತ್ತಿರುವಾಗ ಬೆಂಕಿ ಅವಘಡ ಸಂಭವಿಸಿದೆ ಎಂದು ವೈಟಿಪಿಎಸ್ ಯೋಜನಾ ಪ್ರದೇಶದ ಮುಖ್ಯಸ್ಥ ಶಶಿಕಾಂತ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News