×
Ad

ಜಾಮೀನು ಕೋರಿ ರಾಗಿಣಿ ದ್ವಿವೇದಿ ಅರ್ಜಿ: ಸಿಸಿಬಿಗೆ ನೋಟಿಸ್ ನೀಡಿದ ಕೋರ್ಟ್

Update: 2020-09-04 22:20 IST

ಬೆಂಗಳೂರು, ಸೆ.4: ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಟಿ ರಾಗಿಣಿ ದ್ವಿವೇದಿ ಸಲ್ಲಿಸಿದ್ದ ಅರ್ಜಿ ಸಂಬಂಧ ನ್ಯಾಯಾಲಯ ಸಿಸಿಬಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

ಪೊಲೀಸ್ ವಿಚಾರಣೆಯಲ್ಲಿರುವ ರಾಗಿಣಿ ಅರ್ಜಿ ವಿಚಾರಣೆಯನ್ನು ಶುಕ್ರವಾರ ನಗರದ 34ನೆ ಸಿಸಿಎಚ್ ಕೋರ್ಟ್ ಸೆ.7ಕ್ಕೆ ಮುಂದೂಡಿತು.

ಇದೀಗ ಪೊಲೀಸರು ರಾಗಿಣಿ ಅವರನ್ನು ಬಂಧಿಸಿರುವುದರಿಂದ ರಾಗಿಣಿ ಅವರು ಹೊಸದಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಸಿಸಿಬಿ ಅಧಿಕಾರಿಗಳು ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಕೇಸ್‍ಗೆ ಸಂಬಂಧಿಸಿದಂತೆ ವಿಚಾರಣೆ ಇನ್ನೂ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News