ಬೆಳಗಾವಿ: ವಿವಾದಕ್ಕೆ ಕಾರಣವಾದ ಛತ್ರಪತಿ ಶಿವಾಜಿ ಬೃಹತ್ ನಾಮಫಲಕ

Update: 2020-09-04 17:03 GMT

ಬೆಳಗಾವಿ, ಸೆ.4: ಪೀರನವಾಡಿ ವೃತ್ತದಲ್ಲಿ ಶುಕ್ರವಾರ ಬೆಳಗ್ಗೆ ಸ್ಥಳೀಯ ಕೆಲವರು ಬೃಹತ್ ನಾಮಫಲಕ ಸ್ಥಾಪಿಸಿದ್ದು ವಿವಾದಕ್ಕೀಡಾಗಿದೆ. ನಾಮಫಲಕದಲ್ಲಿ ದೊಡ್ಡ ದಪ್ಪ ಮರಾಠಿ ಅಕ್ಷರಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಚೌಕ್ (ಚಿನ್ನಪಟ್ಟಣ) ಎಂದು ಬರೆದಿದ್ದು, ಕನ್ನಡದ ಹೆಸರು ಕೆಳಗೆ ಇದೆ. ಈ ವಿಚಾರವಾಗಿ ಈಗ ವಿವಾದ ಉಂಟಾಗಿದೆ.

ನಾಮಫಲಕ ಅನಾವರಣ ಕಾರ್ಯಕ್ರಮದ ಬೆನ್ನಿಗೆ ಕನ್ನಡಪರ ಹೋರಾಟಗಾರರು ಈ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡ ನಾಡಿನಲ್ಲಿರುವ ನಾಮಫಲಕಗಳಲ್ಲಿ ಮೊದಲ ಆದ್ಯತೆ ಕನ್ನಡಕ್ಕೇ ಇರಬೇಕು. ನಂತರದ ಸ್ಥಾನ ಬೇರೆ ಭಾಷೆಗೆ ಎಂಬ ನಿಯಮವಿದ್ದರೂ ಎಂಇಎಸ್‍ನವರು ಅದನ್ನು ಮೀರಿ ಸಾಮಾಜಿಕ ಅಶಾಂತಿ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಕನ್ನಡ ಹೋರಾಟಗಾರ ದೀಪಕ್ ಗುಡಗನಟ್ಟಿ ಪ್ರತಿಕ್ರಿಯೆ ನೀಡಿದ್ದು, ನಿಯಮ ಪ್ರಕಾರವೇ ನಾಮಫಲಕ ಸ್ಥಾಪನೆಯಾಗಲಿ. ಅದನ್ನೂ ಸರಕಾರವೇ ಮಾಡಲಿ. ಈಗ ಹಾಕಿರುವ ನಾಮಫಲಕ ತೆರವುಗೊಳಿಸಬೇಕು. ಕನ್ನಡದಲ್ಲಿ ವೃತ್ತದ ಹೆಸರು ದಪ್ಪ ಅಕ್ಷರಗಳಲ್ಲಿ ಇರುವ ನಾಮಫಲಕವನ್ನೇ ಇಲ್ಲಿ ಅಳವಡಿಸಬೇಕು. ಇಲ್ಲದೇ ಹೋದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News